ಡಬ್ಲಿನ್: ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನಾಚರಿಸಿ, ಪತ್ನಿಯೊಂದಿಗೆ ಸೆಕ್ಸ್ ಮಾಡಿದ ಬಳಿಕ ವ್ಯಕ್ತಿಯೊಬ್ಬ ಹತ್ತೇ ನಿಮಿಷಗಳಲ್ಲಿ ತನ್ನ ನೆನಪಿನ ಶಕ್ತಿ ಕಳೆದುಕೊಂಡಿರುವ ಘಟನೆ ಐರ್ಲೆಂಡ್‌ನಲ್ಲಿ ಬೆಳಕಿಗೆ ಬಂದಿದೆ.
ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಇದೊಂದು ಗಂಭೀರ ಸಮಸ್ಯೆ ಅಲ್ಲ, ಅಲ್ಪಾವಧಿ ಅಮ್ನೆಶಿಯಾ (ಮರೆಗುಳಿ) ಎಂದು ಹೇಳಿ ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.
Advertisement
Advertisement
ಲೈಂಗಿಕ ಕ್ರಿಯೆ ನಡೆಸಿದ 66 ವರ್ಷದ ವ್ಯಕ್ತಿ 10 ನಿಮಿಷದ ಬಳಿಕ ಮೊಬೈಲ್ ಫೋನ್‌ನಲ್ಲಿ ದಿನಾಂಕ ನೋಡಿದ್ದಾನೆ. ಹಿಂದಿನ ದಿನ ತನ್ನ ವಿವಾಹ ವಾರ್ಷಿಕೋತ್ಸವ ನಡೆಯಿತು ಎಂಬುದೂ ಆತನಿಗೆ ನೆನಪಿಲ್ಲ. ಅದ್ಧೂರಿಯಾಗಿ ಅದನ್ನು ಆಚರಿಸಿದ್ದರ ಪರಿವೂ ಇಲ್ಲ. ನಿನ್ನೆ ಏನಾಯಿತು ಎಂದು ಪತ್ನಿ, ಮಗಳನ್ನೆ ಕೇಳಿದ್ದಾನೆ. ರಾತ್ರಿಯಿಡೀ ಚೆನ್ನಾಗಿಯೇ ಇದ್ದ ಈತ ಬೆಳಗ್ಗೆ ಎದ್ದು ವಿಚಿತ್ರವಾಗಿ ಮಾತನಾಡುವುದನ್ನು ಕಂಡು ಗಾಬರಿಗೊಂಡ ಮನೆಯವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement
ಏನಿದು ಅಮ್ನೆಶಿಯಾ?: ಇದು ಅಲ್ಪಾವಧಿ ಮರೆಗುಳಿ ಸಮಸ್ಯೆ. ಇದನ್ನು ಟ್ರಾನ್ಸಿಯೆಂಟ್ ಗ್ಲೋಬಲ್ ಅಮ್ನೆಶಿಯಾ ಎನ್ನುತ್ತಾರೆ. 50 ರಿಂದ 70 ವರ್ಷದ ವ್ಯಕ್ತಿಗಳಲ್ಲಿ ಇದು ಕಂಡುಬರುತ್ತದೆ. ಈ ಸಮಸ್ಯೆಗೆ ತುತ್ತಾದ ವ್ಯಕ್ತಿಗಳು ಒಂದು ವರ್ಷದ ಹಿಂದಿನ ಘಟನೆಗಳನ್ನೆಲ್ಲಾ ಮರೆಯುತ್ತಾರೆ. ಅದೃಷ್ಟವಶಾತ್ ಹಾಗೆ ಹೋದ ನೆನಪಿನ ಶಕ್ತಿ ಕೆಲವೇ ಗಂಟೆಗಳಲ್ಲಿ ಮರಳುತ್ತದೆ.
66 ವರ್ಷದ ಐರ್ಲೆಂಡ್ ವ್ಯಕ್ತಿಗೂ ಮರಳಿ ಸ್ಮರಣ ಶಕ್ತಿ ಬಂದಿದೆ. ದೈಹಿಕ ಚಟುವಟಿಕೆ, ಬಿಸಿ ಅಥವಾ ತಣ್ಣಿರಿನಲ್ಲಿ ಮುಳುಗಿದಾಗ, ಭಾವೋದ್ವೇಗ, ಒತ್ತಡ, ನೋವು ಹಾಗೂ ಲೈಂಗಿಕ ಕ್ರಿಯೆ ವೇಳೆ ಈ ರೀತಿ ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.