ನವದೆಹಲಿ: ಭಾರತದ ಮಾಜಿ ಬೌಲರ್‌ಗಳಾದ ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ ಅವರು ಭಾರತದ ಬಗ್ಗೆ ಮಾಡಿದ ಟ್ವೀಟ್‌ಗಳು ಈಗ ಟ್ರೆಂಡಿಂಗ್ ಆಗಿದೆ.
ಇಂದು ಬೆಳಗ್ಗೆ 5:13ಕ್ಕೆ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಯಾವುದೇ ಘಟನೆಯನ್ನು ಉಲ್ಲೇಖಿಸದೇ, ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ….. ಎಂದು ಬರೆದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್
Advertisement
Advertisement
ಈ ಟ್ವೀಟ್‌ಗೆ ತಿರುಗೇಟು ಎಂಬಂತೆ ಮಾಜಿ ಬಲಗೈ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯ ಹೊಂದಿದೆ…ನಮ್ಮ ಸಂವಿಧಾನವೇ ನಮ್ಮ ಮೊದಲ ಪುಸ್ತಕ ಎಂಬುದನ್ನು ಕೆಲವರು ಅರಿತುಕೊಂಡಾಗ ಮಾತ್ರ ಎಂದು ಬರೆದು ತಿರುಗೇಟು ನೀಡಿದ್ದಾರೆ.
Advertisement
Advertisement
ಈಗ ಇಬ್ಬರ ಟ್ವೀಟ್‌ಗಳ ಬಗ್ಗೆ ಚರ್ಚೆ ಆಗುತ್ತಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇರ್ಫಾನ್ ಪಠಾಣ್ ಸರಿಯಾದ ಟ್ವೀಟ್ ಮಾಡಿದ್ದಾರೆ ಎಂದು ಕೆಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್
ಇನ್ನು ಕೆಲವರು ಅಮಿತ್ ಮಿಶ್ರಾ ಸರಿಯಾದ ರೀತಿಯಲ್ಲಿ ಹೇಳಿದ್ದಾರೆ.ಭಾರತದಲ್ಲಿ ಸಂವಿಧಾನ ಪುಸ್ತಕವೇ ಮೊದಲು ಹೊರತು ಧರ್ಮ ಗ್ರಂಥವಲ್ಲ. ಬಲಗೈ ಲೆಗ್ ಸ್ಪಿನ್ನರ್‌ಗೆ ಎಡಗೈ ಬ್ಯಾಟರ್ ಪಠಾಣ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.