Connect with us

Cricket

ಮತ್ತೊಮ್ಮೆ ಈ ಫೋಟೋದಿಂದಾಗಿ ವಿವಾದಕ್ಕೀಡಾದ ಕ್ರಿಕೆಟಿಗ ಇರ್ಫಾನ್ ಪಠಾಣ್

Published

on

ನವದೆಹಲಿ: ರಕ್ಷಾಬಂಧನದ ಪ್ರಯುಕ್ತ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ರಾಖಿ ಕಟ್ಟಿಸಿಕೊಂಡಿರುವ ಚಿತ್ರವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಆ ಫೋಟೋಗೆ ಸಂಬಂಧಪಟ್ಟಂತೆ ಪರ ಮತ್ತು ವಿರೋಧದ ಕಮೆಂಟ್‍ಗಳು ಹರಿದು ಬರುವ ಮೂಲಕ ಇರ್ಫಾನ್ ಸುದ್ದಿಯಲ್ಲಿದ್ದಾರೆ.

ರಕ್ಷಾ ಬಂಧನ ದಿನದಂದು ಇರ್ಫಾನ್ ರಾಖಿ ಕಟ್ಟಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿಕೊಂಡು, ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ತಿಳಿಸಿದ್ದರು. ಫೋಟೋ ಅಪ್ಲೋಡ್ ಆದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲೊ ಭಾರೀ ಚರ್ಚೆಗೆ ಒಳಗಾಗಿದೆ.

ಕೆಲವರು ಮುಸ್ಲಿಮರಾಗಿ ಹಿಂದೂ ಹಬ್ಬವನ್ನು ಆಚರಿಸುತ್ತಿರಲ್ಲ ಮತ್ತು ಮೌಲ್ವಿಯ ಮಗನಾಗಿ ಇಸ್ಲಾಂ ವಿರೋಧಿ ಆಚರಣೆಯನ್ನು ಮಾಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಫೋಟೋಗೆ ಸಂಬಂಧಿಸಿದಂತೆ ಕೆಲವರು ಪರವಾಗಿ ಕಮೆಂಟ್ ಹಾಕುವ ಮೂಲಕ ಇರ್ಫಾನ್‍ಗೆ ಬೆಂಬಲ ಸೂಚಿಸಿದ್ದಾರೆ.

ಇರ್ಫಾನ್ ಪ್ರತಿಕ್ರಿಯೆ: ಧರ್ಮದ ಆಧಾರದ ಮೇಲೆ ಒರಟು ಭಾಷೆಯನ್ನು ಬಳಸುವುದು ಸರಿಯಲ್ಲ. ಇದು ಅವರ ಮನಸ್ಥಿತಿಯನ್ನು ತಿಳಿಸುತ್ತದೆ. ಒಬ್ಬರಿಗೊಬ್ಬರು ಅಸಂಬದ್ಧ ವಾದ ಮಾಡುವುದನ್ನು ನಿಲ್ಲಿಸಿ ಇರ್ಫಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೊದಲು ಇರ್ಫಾನ್ ತಮ್ಮ ಹೆಂಡತಿಯೊಂದಿಗೆ ಇದ್ದ ಚಿತ್ರವನ್ನು ಹಾಕಿದಾಗ ವಿವಾದಕ್ಕೀಡಾಗಿದ್ದರು. ಇರ್ಫಾನ್ ಪತ್ನಿ ಬೆರಳುಗಳಿಗೆ ನೈಲ್ ಫಾಲಿಶ್ ಹಚ್ಚಿದ್ದ ಚಿತ್ರವನ್ನು ಹಾಕಿದಾಗ ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

 

View this post on Instagram

One of those days in Ramadan #peace #love #brothers @yusuf_pathan

A post shared by Irfan Pathan (@irfanpathan_official) on

View this post on Instagram

Missing this boy……. #comeback #nephew

A post shared by Irfan Pathan (@irfanpathan_official) on

View this post on Instagram

Feels great to complete umrah in Ramadan #blessed #makkah

A post shared by Irfan Pathan (@irfanpathan_official) on

View this post on Instagram

Feeling blessed after umrah with @yusuf_pathan #tawaf

A post shared by Irfan Pathan (@irfanpathan_official) on

Click to comment

Leave a Reply

Your email address will not be published. Required fields are marked *