ಡಬ್ಲಿನ್: ಭಾರತದ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಅವರಿಗೆ ಮುಡಿಗೆ ಮತ್ತೊಂದು ದಾಖಲೆ ಸೇರಲು ಸಿದ್ಧವಾಗಿದ್ದು, ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ದಾಖಲೆ ಬರೆಯಲು ವೇದಿಕೆ ಸಿದ್ಧವಾಗಿದೆ.
ಅಂದಹಾಗೇ 29 ವರ್ಷದ ಕೊಹ್ಲಿ 2 ಸಾವಿರ ರನ್ ಗಳಿಸಿದ ವೇಗದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಲು ಕೇವಲ 17 ರನ್ ಗಳು ಬಾಕಿ ಇದೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ 17 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಅವರ ಹೆಸರಿಗೆ ಬರೆಯಲ್ಪಡುತ್ತದೆ.
Advertisement
Advertisement
ಕೊಹ್ಲಿ 57 ಪಂದ್ಯಗಳ 53 ಇನ್ನಿಂಗ್ಸ್ ನಲ್ಲಿ ಬ್ಯಾಟ್ ಮಾಡಿ 50.84 ರ ಸರಾಸರಿಯಲ್ಲಿ 1,983 ರನ್ ಗಳಿಸಿದ್ದಾರೆ. ಸದ್ಯ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಒಂದೊಮ್ಮೆ 17 ರನ್ ಗಳಿಸಿದರೆ ಕಡಿಮೆ ಪಂದ್ಯವಾಡಿ ವೇಗವಾಗಿ 2 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ 17 ರನ್ ಗಳಿಸದೇ ಇದ್ದರೂ ಟೂರ್ನಿಯಲ್ಲಿ ಕೊಹ್ಲಿಗೆ ದಾಖಲೆ ನಿರ್ಮಿಸಲು ಹೆಚ್ಚಿನ ಅವಕಾಶವಿದೆ.
Advertisement
ಸದ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೆಕ್ಲಮ್ 68 ಪಂದ್ಯಗಳ 66 ಇನ್ನಿಂಗ್ ಆಡಿ 2 ಸಾವಿರ (2,140) ರನ್ ಪೂರೈಸಿದ್ದಾರೆ. ಉಳಿದಂತೆ ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ 2,271 ರನ್ ಗಳಿಸಿದ್ದರೆ, ಪಾಕಿಸ್ತಾನ ಆಟಗಾರ ಮಲ್ಲಿಕ್ 1,989 ರನ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.
Advertisement
ವಿಶ್ವ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಕೊಹ್ಲಿ ಇದುವರೆಗೂ ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿಲ್ಲ. ಇನ್ನು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 2007 ರ ಬಳಿಕ ನಾಲ್ಕು ಬಾರಿ ಮಾತ್ರ ಮುಖಾಮುಖಿ ಆಗಿದೆ. ಸದ್ಯದ ಟೂರ್ನಿಯಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಬಳಿಕ ಇಂಗ್ಲೆಂಡ್ ಪ್ರವಾಸ ಆರಂಭಿಸಲಿದೆ.