ಮುಂಬೈ: ಲೋಕಲ್ ಟ್ರೈನ್ (Harbour Line) ಮತ್ತು ಕೇಂದ್ರ ರೈಲುಗಳಲ್ಲಿ (Central Railway) ಕಲ್ಯಾಣ್‍ನಿಂದ (Kalyan) ಇಗತ್‍ಪುರಿವರೆಗಿನ (Igatpuri) ಎಲ್ಲಾ ನಿಲ್ದಾಣಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮುಂದಿನ 18 ದಿನಗಳವರೆಗೆ ತಮ್ಮದೇ ಆದ ನೀರಿನ ಬಾಟಲಿಗಳನ್ನು ಕೊಂಡೊಯ್ಯಬೇಕಾಗುತ್ತದೆ.
ಕೇಂದ್ರ ರೈಲ್ವೆ ಬರೆದಿರುವ ಪತ್ರದಲ್ಲಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (Indian Railway Catering and Tourism Corporation) (IRCTC) ಹಬ್ಬದ ಸೀಸನ್ ಆಗಿದ್ದರಿಂದ ನೀರಿನ ಬಾಟಲ್ ಉತ್ಪಾದನೆ ಹಠಾತ್ ಸ್ಥಗಿತಗೊಂಡಿದ್ದು, ರೈಲಿನಲ್ಲಿ ಪ್ಯಾಕೇಜ್‍ನಲ್ಲಿ ದೊರೆಯುವ ನೀರಿಗೆ ಕೂಡ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಅಕ್ಟೋಬರ್ 29 ರಿಂದ ನವೆಂಬರ್ 15 ರವರೆಗೆ ರೈಲ್ ನೀರ್ (Rail Neer) ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
- Advertisement
ಮುಂಬೈ ವಿಭಾಗದ ಹೊರತಾಗಿ, ಭೂಸಾವಲ್, ಮನ್ಮಾಡ್, ನಾಸಿಕ್ ರಸ್ತೆ, ಸೋಲಾಪುರ, ದೌಂಡ್ ಮತ್ತು ಅಹಮದ್‍ನಗರ ನಿಲ್ದಾಣಗಳಲ್ಲಿ ನವೆಂಬರ್ 15 ರವರೆಗೆ ರೈಲಿನಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಇದನ್ನೂ ಓದಿ: ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ
- Advertisement
ಪ್ರಯಾಣಿಕರಿಗೆ ನೀಡಬೇಕಾದ ಪ್ರಮುಖ ಸೌಕರ್ಯಗಳಲ್ಲಿ ರೈಲ್ ನೀರ್ ಕೂಡ ಒಂದು. ಪ್ರತಿ 1 ಲೀಟರ್‌ಗೆ 15 ರೂ.ಗೆ ನೀರು ದೊರೆಯುತ್ತದೆ. ನೀರಿನ ಬಾಟಲ್‍ಗಳನ್ನು ಅಂಬರ್‌ನಾಥ್‍ನಲ್ಲಿರುವ ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಬಳಿಕ ಅದನ್ನು ವಿತರಿಸಲಾಗುತ್ತದೆ. ಹಬ್ಬದ ಹಿನ್ನೆಲೆ ರೈಲ್ವೆ ನಿಲ್ದಾಣಗಳಲ್ಲಿ ಜನ ಹೆಚ್ಚಾಗುತ್ತಿರುವ ಹಿನ್ನೆಲೆ ನೀರಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು