ಟೆಹ್ರಾನ್: ಮಹಿಳೆಯರಿಬ್ಬರು (Women) ಸಾರ್ವಜನಿಕ ಸ್ಥಳದಲ್ಲಿ ಹಿಜಬ್ (Hijab) ಧರಿಸದ್ದಕ್ಕೆ ಮೊಸರು ಸುರಿದು (Yoghurt) ಹಲ್ಲೆ ನಡೆಸಿದ ಘಟನೆ ಇರಾನಿನಲ್ಲಿ (Iran) ನಡೆದಿದೆ.
ಇರಾನಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ವೀಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
مشهد، شاندیز
از صفحه یاسر عرب pic.twitter.com/zstrtACMQD
— Mehdi Nakhl Ahmadi (مهدی نخل احمدی) (@MehdiNakhl) March 31, 2023
Advertisement
ವೀಡಿಯೋದಲ್ಲಿ ಏನಿದೆ?: ಇಬ್ಬರು ಮಹಿಳೆಯರು ಅಂಗಡಿಯೊಂದಕ್ಕೆ ಹಿಜಬ್ ಧರಿಸದೇ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಬಂದ ವ್ಯಕ್ತಿಯೊಬ್ಬ ಆ ಇಬ್ಬರು ಮಹಿಳೆಯರ ಮೇಲೆ ಕೂಗಾಡಿದ್ದಾನೆ. ನಂತರ ಆತ ಹತ್ತಿರ ಕಪಾಟಿನಲ್ಲಿದ್ದ ಮೊಸರಿನ ಪ್ಯಾಕೆಟ್‍ನ್ನು ತೆಗೆದುಕೊಂಡು ಕೋಪದಿಂದ ಇಬ್ಬರು ಮಹಿಳೆಯರ ತಲೆ ಮೇಲೆ ಎಸೆದಿದ್ದಾನೆ. ನಂತರ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾನೆ.
Advertisement
ಘಟನೆಯ ನಂತರ ಇರಾನ್ ಪೊಲೀಸರು ಹಿಜಬ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆಗೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.
Advertisement
ಇರಾನ್‍ನಲ್ಲಿ ಮಹಿಳೆಯರೂ ಹಿಜಬ್ ಧರಿಸುವುದು ಕಡ್ಡಾಯವಾಗಿದ್ದು, 7 ವರ್ಷದ ಹುಡುಗಿಯಿಂದ ಹಿಡಿದು ಪ್ರತಿಯೊಬ್ಬ ಮಹಿಳೆಯು ಹಿಜಬ್ ಧರಿಸಬೇಕು ಎಂದು ಕಾನೂನು ಇದೆ. ಆದರೆ ಕಳೆದ ವರ್ಷದಿಂದ ಹಲವೆಡೆ ಹಿಜಬ್ ವಿರೋಧಿಸಿ ಇರಾನ್‍ನ ನಾನಾ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್
ಹಿಜಬ್ ವಿರೋಧಿ ಹೋರಾಟ?: ಕಳೆದ ವರ್ಷ ಮಹ್ಸಾ ಅಮಿನಿ ಎಂಬ ಯುವತಿಯನ್ನು ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ನೈತಿಕ ಪೊಲೀಸ್‍ಗಿರಿಗೆ ಆಕೆ ಬಲಿಯಾಗಿದ್ದಳು. ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇರಾನ್‍ನಲ್ಲಿ ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಯುವತಿ ಸಾವಿನ ಬಳಿಕ ಇರಾನ್‍ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 14,000 ಮಂದಿಯನ್ನು ಆಗ ಬಂಧಿಸಲಾಗಿತ್ತು. ಅವರಲ್ಲಿ ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳೂ ಸೇರಿದ್ದರು. ಮಾತ್ರವಲ್ಲದೇ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಹಲವರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು, ನಡುರಸ್ತೆಯಲ್ಲೇ ಹಿಜಬ್ ಸುಟ್ಟು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ- ಮಹಿಳೆ ಸಾವು