ಇರಾನ್‌ನಲ್ಲಿ ಹಿಜಬ್‌ ವಿವಾದ ಮತ್ತೆ ಮುನ್ನೆಲೆಗೆ – ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಯುವತಿ ಅರೆಸ್ಟ್‌

Public TV
2 Min Read
Iran Women Protest

ಟೆಹ್ರಾನ್‌: ಕಡ್ಡಾಯವಾಗಿ ಹಿಜಬ್‌ ಧರಿಸಬೇಕೆಂಬ ವಸ್ತ್ರ ಸಂಹಿತೆ ವಿರುದ್ಧ ಇರಾನ್ ವಿಶ್ವವಿದ್ಯಾನಿಲಯದ‌ (Islamic Azad University) ಆವರಣದಲ್ಲಿ ಒಳ ಉಡುಪು ಧರಿಸಿ ಪ್ರತಿಭಟನೆ (Iranian Woman Protest) ನಡೆಸಿದ್ದ ಇರಾನ್‌ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಟೆಹ್ರಾನ್‌ನ ಇಸ್ಲಾಮಿಕ್‌ ಆಜಾಜ್‌ ವಿವಿಯಲ್ಲಿ ಒಳಉಡುಪು ಧರಿಸಿಕೊಂಡು ಸುತ್ತಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದ ಯುವತಿಯ ವೀಡಿಯೋ ಒಂದು ದಿನದ ಹಿಂದೆಯಷ್ಟೇ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಯುವತಿಯ ಪರ – ವಿರೋಧ ಚರ್ಚೆಗಳೂ ಹುಟ್ಟಿಕೊಂಡಿವೆ. ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

School Girls hijab iran protest 2

ಇರಾನ್‌ನಲ್ಲಿ ಮುಸ್ಲಿಂ ಸಮುದಾಯದ (Muslim Community) ಮೂಲಭೂತವಾದಿಗಳು ಆಚರಣೆಯಲ್ಲಿಟ್ಟಿರುವ ಕಟ್ಟುನಿಟ್ಟಾದ ವಸ್ತ್ರಸಂಹಿತೆ ಹಾಗೂ ನೈತಿಕ ಪೊಲೀಸ್‌ಗಿರಿ ವಿರುದ್ಧ ಪ್ರತಿಭಟಿಸಲೆಂದೇ ಯುವತಿ ಒಳ ಉಡುಪಿನಲ್ಲಿ ಸಾರ್ವಜನಿಕವಾಗಿ ತಿರುಗಾಡಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ ಇಸ್ಲಾಮಿಕ್‌ ವಿಶ್ವವಿದ್ಯಾಲಯದ ವಕ್ತಾರ ಅಮೀರ್‌ ಮಹಜೋಬ್, ಕ್ಯಾಂಪಸ್‌ನಲ್ಲಿ ಒಳ ಉಡುಪಿನಲ್ಲಿ ತಿರುಗಾಡಿರುವ ಯುವತಿ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂದು ಹೇಳಿದ್ದರು. ಇದನ್ನೂ ಓದಿ: Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

ಯುವತಿಯೊಬ್ಬಳು ಸಾರ್ವಜನಿಕವಾಗಿ ಒಳ ಉಡುಪಿನಲ್ಲಿ ಕಾಣಿಸಿಕೊಳ್ಳುವುದು ಇರಾನ್‌ ಮಹಿಳೆಯರಿಗೆ ಊಹಿಕೊಳ್ಳಲು ಅಸಾಧ್ಯವಾದ ಕೆಲಸ. ಆದರೆ, ಹಿಜಬ್‌ ಕಡ್ಡಾಯ ಎಂಬ ಮೂರ್ಖತನಕ್ಕೆ ಇದು ಸರಿಯಾದ ಪ್ರತಿಕ್ರಿಯೆಯಾಗಿದೆ ಎಂದು ಲೈಲಾ ಎನ್ನುವ ಇರಾನ್‌ ನಿವಾಸಿಯ ʻಎಕ್ಸ್‌ʼ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

WOMEN PROTEST in iran

2 ವರ್ಷಗಳ ಹಿಂದಿನ ಹಿಂಸಾಚಾರ ನೆನಪಿದೆಯೆ?
2022ರಲ್ಲಿ ಇರಾನ್‌ ಪೊಲೀಸರ ವಶದಲ್ಲಿದ್ದ ಮಹ್ಸಾ ಅಮಿನಿಯಾ ಎಂಬ ಇರಾನ್‌ ಮೂಲದ ಯುವತಿಯು (ಹಿಜಬ್‌ ಧರಿಸದ ಅಪರಾಧ ಹಿನ್ನೆಲೆಯಲ್ಲಿ ಬಂಧಿತೆ) ಮೃತಪಟ್ಟ ಘಟನೆಯ ನಂತರ ಹಿಜಬ್‌ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ಪ್ರತಿಭಟನಾಕಾರರ ಮೇಲೆ ಗುಂಡಿಕ್ಕುವಂತಹ ನಿರ್ದಾಕ್ಷಿಣ್ಯ ಕ್ರಮಗಳ ಮೂಲಕ ಕ್ರಮೇಣ ಜನರ ಆಕ್ರೋಶವನ್ನು ತಣ್ಣಗಾಗಿಸಲಾಗಿತ್ತು. ಸಾವಿರಾರು ಮಂದಿಯನ್ನು ಬಂಧಿಸಿ ಇರಾನ್‌ ಸರ್ಕಾರ ಜೈಲಿಗಟ್ಟಿತ್ತು. ಆ ಬಳಿಕ ಇರಾನ್‌ನಲ್ಲಿ ಪ್ರತಿಭಟನೆ ಕಾವು ತಣ್ಣಗಾಗಿತ್ತು. ಇದೀಗ ಯುವತಿ ಒಳುಡುಪು ಧರಿಸಿ ತಿರುಗಾಡಿದ ಹಿನ್ನೆಲೆ ಮತ್ತೆ ಹಿಜಬ್‌ ವಿವಾದ ಮುನ್ನೆಲೆಗೆ ಬಂದಿದೆ.

Share This Article