ಹಿಜಬ್ ಕಳಚಿದ ವೀಡಿಯೋ ಪೋಸ್ಟ್ – ಇರಾನಿ ನಟಿ ಅರೆಸ್ಟ್

Public TV
1 Min Read
Hengameh Ghaziani

ಟೆಹ್ರಾನ್: ಹಿಜಬ್ ವಿರುದ್ಧ ಇರಾನ್ (Iran) ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಈ ನಡುವೆ ನಟಿಯೊಬ್ಬರು ಸಾರ್ವಜನಿಕವಾಗಿ ಹಿಜಬ್ (Hijab) ಅನ್ನು ತೆಗೆದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕುರ್ದಿಶ್ ಮೂಲದ 22 ವರ್ಷದ ಇರಾನಿಯನ್ ಅಮಿನಿ (Mahsa Amini), ಸೆಪ್ಟೆಂಬರ್ 16ರಂದು ಮೃತಪಟ್ಟಿದ್ದಳು. ತಮ್ಮನ ಜೊತೆ ಟೆಹರಾನ್ (Tehran) ಪಟ್ಟಣದಲ್ಲಿ ತೆರಳುವಾಗ ಮಹಿಳೆಯರಿಗೆ ಇರುವ ಇಸ್ಲಾಮಿಕ್ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿ ಆಕೆಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಇದಾಗಿ ಮೂರು ದಿನಗಳ ಬಳಿಕ ಆಕೆ ಮೃತಪಟ್ಟಿದ್ದಳು. ಈ ವಿರುದ್ಧ ಇರಾನ್‍ನಲ್ಲಿ ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗಳಿಂದ ಕ್ಲೆರಿಕಲ್ ಆಡಳಿತ ಅಲುಗಾಡುತ್ತಿದೆ.

ಇದೀಗ ಹಿಜಬ್ ಗಲಭೆಗೆ ಪ್ರಚೋದನೆ ಮತ್ತು ಬೆಂಬಲ ನೀಡಿ, ಮಾಧ್ಯಮದೊಂದಿಗೆ ಸಂವಹನ ನಡೆಸಿದ್ದಕ್ಕಾಗಿ 52 ವರ್ಷದ ನಟಿ ಹೆಂಗಮೆಹ್ ಘಜಿಯಾನಿ (Hengameh Ghaziani) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲೇ ನ್ಯಾಯಾಂಗ ತನಿಖೆಗೆ ಹಾಜರಾಗುವಂತೆ ತನಗೆ ಸಮನ್ಸ್ ಕಳುಹಿಸಲಾಗಿದ್ದು, ಕಡ್ಡಾಯವಾಗಿ ಹಿಜಬ್ ಕಳಚಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ನಟಿ ತಿಳಿಸಿದ್ದರು. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

ಶಾಪಿಂಗ್ ಸ್ಟ್ರೀಟ್‍ನಲ್ಲಿ ಚಿತ್ರೀಕರಿಸಲಾದ ಈ ವೀಡಿಯೋದಲ್ಲಿ, ಘಜಿಯಾನಿ ಅವರು ಮಾತನಾಡದೇ ಕ್ಯಾಮೆರಾ ಮುಂದೆ ನಿಂತು ಹಿಂದೆ ತಿರುಗಿ ಕೂದಲನ್ನು ಗಂಟು ಹಾಕುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ಜೊತೆಗೆ ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು. “ಈ ಕ್ಷಣದಿಂದ, ನನಗೆ ಯಾವಾಗ ಏನಾಗುತ್ತೊ ಗೊತ್ತಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇರಾನ್ ಜನರೊಂದಿಗೆ ಇರುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *