ಬೆಳಗಾವಿ: ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ನಾಡದ್ರೋಹಿ ಎಂಇಎಸ್ ಭಾಷೆ, ಜಾತಿ ಆಧಾರದಲ್ಲಿ ಮತಯಾಚನೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜನ ಇದರಿಂದ ರೋಸಿ ಹೋಗಿದ್ದು, ನಾವು ಅಭಿವೃದ್ಧಿಪರ ಮತ ಕೇಳಬೇಕಾಗುತ್ತೆ. ಭಾಷೆ, ಜಾತಿ ವಿಚಾರ ಬಿಟ್ಟು ಅಭಿವೃದ್ಧಿ ಪರ ಮತ ಮಾಡಲು ಮನವಿ ಮಾಡ್ತೇನೆ. ಕೇವಲ ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ
Advertisement
Advertisement
ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಎಂ ಪ್ಲಸ್ ಎಂ ಫಾರ್ಮುಲಾ ವಿಚಾರವಾಗಿ ಮಾತನಾಡಿದ ಅವರು, ನಾನು ನಗರದ ಮರಾಠಿ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ ಸ್ಥಾಪನೆಗೆ ಹೋರಾಟ ಮಾಡಿದ್ದರು. ಛತ್ರಪತಿ ಶಿವಾಜಿ ವಂಶಸ್ಥರು ಎಂಐಎಂಗೆ ಅವಕಾಶ ಕೊಡಲ್ಲ ಎಂಬ ವಿಶ್ವಾಸವಿದೆ. ಇವತ್ತು ಬಿಜೆಪಿ ಅಧಿಕಾರ ಬಂದ್ಮೇಲೆ ದೇಶ, ರಾಜ್ಯದಲ್ಲಿ ಬದಲಾವಣೆ ಆಗಿದೆ. ಆ ರೀತಿ ಬದಲಾವಣೆ ಬೆಳಗಾವಿ ನಗರಕ್ಕೂ ತರುವ ಕಲ್ಪನೆ ಇದೆ ಎಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ.
Advertisement
ಬೆಳಗಾವಿ ಜನ ಎಂಇಎಸ್‍ನಿಂದ ರೋಸಿ ಹೋಗಿದ್ದು, ಅಭಿವೃದ್ಧಿ ಪರ ಮತ ಕೊಡ್ತಾರೆ. ಕೇವಲ ಜನರ ಭಾವನೆ ಕೆರಳಿಸಿ ಚುನಾವಣೆ ಮಾಡಲಾಗುವುದಿಲ್ಲ. ಇದರಿಂದ ಜನ ಬೇಸತ್ತು ಹೋಗಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕಲಿಸುತ್ತಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ
Advertisement
ಭಾಷೆ, ಜಾತಿ ಆಧಾರದ ಮೇಲೆ ಎಂಇಎಸ್ ಮತಯಾಚನೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗ ಈ ಕುರಿತು ಕ್ರಮ ಕೈಗೊಳ್ಳಬೇಕು ಆಗ್ರಹ ಮಾಡ್ತೇನೆ. ಪೊಲೀಸ್ ವ್ಯವಸ್ಥೆ, ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಕೆಲಸ ಮಾಡಬೇಕಾಗುತ್ತೆ. ನಮ್ಮದು ಮನೆ ಮನೆಗೆ ಹೋಗಿ ನಮ್ಮ ಪಕ್ಷದ ಬಗ್ಗೆ ತಿಳಿಸುವುದು. ಈ ಬಾರಿ ಬಿಜೆಪಿಯಿಂದ ಮೇಯರ್ ಆಯ್ಕೆ ಮಾಡುವುದಕ್ಕೆ ಯಾವ ರೀತಿಯ ಪ್ರಯತ್ನಬೇಕು ಅದನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.