ಟೆಹರಾನ್: ಹಿಜಬ್ (Hijab) ಧರಿಸದೇ ಪ್ರತಿಭಟನೆಗೆ ಇಳಿಯಲು ಸಜ್ಜಾಗುತ್ತಿದ್ದ 20ರ ಯುವತಿಗೆ ಭದ್ರತಾ ಪಡೆಯ ಅಧಿಕಾರಿಗಳೇ ಗುಂಡಿಕ್ಕಿ ಕೊಂದಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.
#HadisNajafi était une jeune fille de 20 ans, audacieuse et courageuse.
La tête dévoilée, les cheveux en arrière, elle avait rejoint les manifestations.
Ils l'ont tué de 6 balles.
Hadith est une héroïne.
#NousSommesLeursVoix pic.twitter.com/2oExsvP3IY
— Anton Struve ???? (@AntonStruve) September 25, 2022
Advertisement
ಇರಾನ್‌ನ ಮಹ್ಸಾ ಆಮಿನಿ ಸಾವು ಖಂಡಿಸಿ ಪ್ರತಿಭಟನೆಗೆ (Iran Protest) ಮುಂದಾಗಿದ್ದ 20ರ ಹರೆಯದ ಯುವತಿ ಹದಿಸ್ ನಝಾಫಿ (Hadis Najafi) ಹೊಟ್ಟೆ, ಕುತ್ತಿಗೆ, ಹೃದಯ ಹಾಗೂ ಕೈಗೆ ಗುಂಡುಗಳನ್ನು ಹಾರಿಸಿದ್ದಾರೆ. ಹದಿಸ್ ನಝಾಫಿ ತನ್ನ ತಲೆಕೂದಲನ್ನು ಹಿಂದಕ್ಕೆ ಕಟ್ಟಿಕೊಂಡು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣ (Social Media) ದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಷ್ಯಾದ ಶಾಲೆಯಲ್ಲಿ ಮನಸ್ಸೋಇಚ್ಛೆ ಗುಂಡು ಹಾರಿಸಿದ ಬಂದೂಕುಧಾರಿ- 5 ಮಕ್ಕಳು ಸೇರಿ 9 ಮಂದಿ ದುರ್ಮರಣ
Advertisement
Advertisement
ಹಿಜಬ್ (Hijab) ಧರಿಸದೇ ಇದ್ದುದಕ್ಕಾಗಿ ಪೊಲೀಸರ (Police) ಥಳಿತಕ್ಕೆ ಒಳಗಾಗಿ ಕೋಮಾ ಸ್ಥಿತಿಗೆ ತಲುಪಿ ಯುವತಿ (ಮಹ್ಸಾ ಆಮಿನಿ) ಸಾವನ್ನಪ್ಪಿದ ನಂತರ ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. ಈಗಾಗಲೇ 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 50ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ವೇಳೆ ಬಲಿಯಾಗಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್‍ನಲ್ಲಿ ಬೆಂಕಿ – 17 ಮಂದಿ ಸಜೀವ ದಹನ
Advertisement
This is the funeral of 20 year old #HadisNajafi, who was shot dead on the streets by security forces for protesting yhe murder of #MahsaAmini by Hijab Police.
Hadis was a kind hearted girl and loved dancing. pic.twitter.com/tduxVe1SZf
— Masih Alinejad ????️ (@AlinejadMasih) September 25, 2022
ಯುವತಿ ಹದಿಫ್ ನಝಾಫಿ (HadisNajafi) ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದ ವೇಳೆ ಆಕೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಮಹ್ಸಾ ಸಾವನ್ನು ಖಂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತಯಾರಾಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಎದೆಯ ಭಾಗ, ಮುಖ, ಕುತ್ತಿಗೆ ಭಾಗಕ್ಕೆ 6 ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಲಾಗಿದೆ.