ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ(Strait of Hormuz) ಹಡಗುಗಳು ಸುರಕ್ಷಿತವಾಗಿ ಸಂಚರಿಸಲು ಯುದ್ಧನೌಕೆಗಳನ್ನು (Warship) ಕಳಿಸಿಕೊಡಿ ಎಂದು ಕರೆ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ(Donald Trump) ಭಾರೀ ಮುಖಭಂಗವಾಗಿದೆ.
ಜಲಸಂಧಿಯನ್ನು ಸುರಕ್ಷಿತವಾಗಿಡಲು ಹಡಗುಗಳನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಜಪಾನ್, ಆಸ್ಟ್ರೇಲಿಯಾ ಮತ್ತು ಯುಕೆ (UK) ತಿಳಿಸಿವೆ.
ಜಪಾನ್ (Japan) ಪ್ರಧಾನಿ ಸನೇ ತಕೈಚಿ ಅವರು ಇಂದು ನೌಕಾ ಹಡಗುಗಳನ್ನು ನಿಯೋಜಿಸುವ ಯಾವುದೇ ಯೋಜನೆಯನ್ನು ತಾನು ಪ್ರಸ್ತುತ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ(Australia) ಹಡಗುಗಳನ್ನು ನಿಯೋಜಿಸುವುದಿಲ್ಲ ಎಂದು ಹೇಳಿದೆ.
ದಕ್ಷಿಣ ಕೊರಿಯಾ ಅಮೆರಿಕದ ಜೊತೆ ಈ ವಿಷಯವನ್ನು ಚರ್ಚಿಸುತ್ತಿದೆ. ಆದರೆ ಯಾವುದೇ ಸಂಭಾವ್ಯ ಕ್ರಮವು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ನಡೆಯುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: RSS, RAW ಬ್ಯಾನ್ ಮಾಡಿ – ಟ್ರಂಪ್‌ಗೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಶಿಫಾರಸು
ಟ್ರಂಪ್ ಹೇಳಿದ್ದೇನು?
ಹಾರ್ಮುಜ್ ಜಲಸಂಧಿಯಲ್ಲಿ ಆಗಿರುವ ಈ ಕೃತಕ ನಿರ್ಬಂಧವನ್ನು ತೆರೆಯಲು ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಯುಕೆ ಮತ್ತು ಇತರರು ಆ ದೇಶಗಳಿಗೆ ಹಡಗನ್ನು ಕಳುಹಿಸಿ ಕೊಡುತ್ತಾರೆ ಎಂಬ ಆಶಯ ನನಗಿದೆ. ಯುದ್ಧ ನೌಕೆಗಳುಗಳು ಬಂದರೆ ಇರಾನ್ ಮತ್ತೆ ಬೆದರಿಕೆ ಹಾಕುವುದಿಲ್ಲ ಎಂದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ನಾವು ಪ್ರತಿಯೊಂದು ಹಡಗಿನ ಜೊತೆ ಸಂಪರ್ಕದಲ್ಲಿದ್ದೇವೆ, ನಾಳೆ ಬರುತ್ತೆ 81 ಸಾವಿರ ಟನ್ ಕಚ್ಚಾ ತೈಲ: ಕೇಂದ್ರ

