ಗದಗ: ಗ್ಯಾಸ್ ಸಿಲಿಂಡರ್ ಸಿಗದ್ದಕ್ಕೆ ಜನರು ಪರದಾಟ ನಡೆಸುತ್ತಿದ್ದು ಸ್ವತ: ಕಾಂಗ್ರೆಸ್‌ನವರೇ (Congress) ಬೀದಿಗಿಳಿದು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಚಿವ ಎಚ್.ಕೆ ಪಾಟೀಲ್ (HK Patil) ಆಯೋಜಿಸಿದ ಕಾರ್ಯಕ್ರಮದಲ್ಲಿ 12 ವಾಣಿಜ್ಯ ಸಿಲಿಂಡರ್‌ಗಳು (Commercial LPG Cylinder) ಪ್ರತ್ಯಕ್ಷವಾಗಿವೆ.
ದಿವಂಗತ ಕೆ.ಎಚ್. ಪಾಟೀಲರ 101ನೇ ಜಯಂತೋತ್ಸವ ಕಾರ್ಯಕ್ರಮ ಗದಗನ ಕಾಟನ್ ಸೇಲ್ ಸೊಸೈಟಿಯಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 10 ಸಾವಿರ ಜನರಿಗೆ ಉಪಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ – ಹೋಟೆಲ್ ಉದ್ಯಮಕ್ಕೆ ಮತ್ತೆ ಸರ್ಕಾರ ಶಾಕ್
12 ಕಮರ್ಷಿಯಲ್ ಸಿಲಿಂಡರ್ ಬಳಸಿ ಚಪಾತಿ, ರೊಟ್ಟಿ, ಅನ್ನ ಸಾಂಬರ್, ಮೊಸರು ಅನ್ನ, ಪಲ್ಯ, ಸೇರಿದಂತೆ ಅನೇಕ ತರಹದ ಸಿಹಿ ಪದಾರ್ಥ ಅಡುಗೆ ವ್ಯವಸ್ಥೆ ಮಾಡಿದ್ದಾರೆ.
ಸಚಿವರಾದ ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೇರೆ ಕಡೆ ಸಿಲಿಂಡರ್ ವಿತರಣೆ ಆಗುತ್ತಿಲ್ಲ. ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬಂದಿದ್ದರೂ ಹೆಚ್‌ಕೆ ಪಾಟೀಲ್ ಕಾರ್ಯಕ್ರಮದಲ್ಲಿ 12 ವಾಣಿಜ್ಯ ಸಿಲಿಂಡರ್ ಕಾಣಿಸಿಕೊಂಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

