ನವದೆಹಲಿ: ಭಾರತದಲ್ಲಿ(India) ಮತ್ತೆ ಮನೆಯ ಅಡುಗೆಗೆ ಸೀಮೆಎಣ್ಣೆ(Kerosene) ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಗುರುವಾರ ರಾಜ್ಯಗಳಿಗೆ ಕೇಂದ್ರ 1 ಲಕ್ಷ ಕಿಲೋಲೀಟರ್ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಪ್ರಾಥಮಿಕವಾಗಿ ಪಡಿತರ ಅಂಗಡಿಗಳ (PDS) ಮೂಲಕ ಸೀಮೆಎಣ್ಣೆಯನ್ನು ವಿತರಿಸಲಾಗುತ್ತದೆ.
ಹೋಟೆಲ್, ರೆಸ್ಟೋರೆಂಟ್‌ಗಳು ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್‌ಡಿಎಫ್ ಪೆಲೆಟ್‌ಗಳು ಮತ್ತು ಕಲ್ಲಿದ್ದಲನ್ನು (Coal) ಒಂದು ತಿಂಗಳ ಕಾಲ ಬಳಸಲು ಅನುಮತಿ ನೀಡುವಂತೆ ಪರಿಸರ ಸಂಸ್ಥೆಗಳನ್ನು ಕೇಳಿದೆ. ಇದನ್ನೂ ಓದಿ: 14 ದಿನಗಳಾದ್ರೂ ಕೊನೆಗಾಣದ ಮಧ್ಯಪ್ರಾಚ್ಯ ಯುದ್ಧ – ಪ್ರವಾಸೋದ್ಯಮಕ್ಕೂ ತಟ್ಟಿದ ವಾರ್ ಎಫೆಕ್ಟ್
ಸೀಮೆಎಣ್ಣೆಯ ಬದಲು ಅಡುಗೆಗೆ ಎಲ್‌ಪಿಜಿ ಬಳಸುವ ಅಭಿಯಾನ 2012 ರಲ್ಲಿ ಆರಂಭವಾಗಿತ್ತು. ಈಗ ಉಜ್ವಲ ಯೋಜನೆಯ ಅಡಿ ಬಡ ಕುಟುಂಬಕ್ಕೆ ಸರ್ಕಾರ ಸಬ್ಸಿಡಿ ದರದಲ್ಲಿ ಸಿಲಿಂಡರ್ ನೀಡುತ್ತಿದೆ.
ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಬುಕ್ಕಿಂಗ್ ಅವಧಿಯನ್ನು ಏರಿಸಲಾಗಿದೆ. ಮೊದಲು 25 ದಿನಕ್ಕೆ ಒಂದು ಸಿಲಿಂಡರ್ ಸಿಗುತ್ತಿತ್ತು. ಇನ್ನು ಮುಂದೆ 45 ದಿನಗಳಿಗೊಮ್ಮೆ ಸಿಲಿಂಡರ್ ಸಿಗಲಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆಯಾದರೆ ಅಮೆರಿಕ ಭಾರೀ ಹಣ ಗಳಿಸಲಿದೆ: ಡೊನಾಲ್ಡ್ ಟ್ರಂಪ್

