ಟೆಹರಾನ್: ಇಸ್ರೇಲ್ (Israel) ಮೇಲೆ ಇರಾನ್ (Iran) ಇದೇ ಮೊದಲ ಬಾರಿಗೆ ಹೈಪರ್‌ಸಾನಿಕ್ ಕ್ಷಿಪಣಿ (Hypersonic Missiles) ಪ್ರಯೋಗಿಸಿ ದಾಳಿ ನಡೆಸಿದೆ.
ಇಸ್ರೇಲ್ ಮೇಲೆ ನಾವು ಹೈಪರ್‌ಸಾನಿಕ್ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ತಿಳಿಸಿದೆ. ಇಸ್ರೇಲಿನ ಐರನ್‌ಡೋಮ್ ತಪ್ಪಿಸಲು ಫತಾಹ್ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಇರಾನ್ ಬಳಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶಬ್ದಕ್ಕಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೈಪರ್‌ಸಾನಿಕ್ ಕ್ಷಿಪಣಿಗಳಿಗಿದ್ದು ಇರಾನ್ ಕಳೆದ ವರ್ಷದ ಜೂನ್‌ನಲ್ಲಿ ಫತಾಹ್-1, ನವೆಂಬರ್‌ನಲ್ಲಿ ಫತಾಹ್- 2 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಬಳಸಲಾದ 80-90% ಕ್ಷಿಪಣಿಗಳು ನಿಗದಿತ ಗುರಿಯನ್ನು ಹೊಡೆದು ಹಾಕಿವೆ ಎಂದು IRGC ಹೇಳಿಕೊಂಡಿದೆ. ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ
ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿರುವ ಗುಪ್ತಚರ ಸಂಸ್ಥೆ ಮೊಸ್ಸಾದ್ ಕೇಂದ್ರ ಕಚೇರಿ, ಅಮೆರಿಕ ನಿರ್ಮಿಸಿದ ಎಫ್ 16 ವಿಮಾನಗಳನ್ನು ನಿಲ್ಲಿಸಿರುವ ಏರ್‌ಬೇಸ್ ಹೌಸ್‌ಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಗಳು ಪ್ರಕಟವಾಗಿದೆ. ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್
ಫತಾಹ್-1 ಕ್ಷಿಪಣಿ 350-450 ಕೆಜಿ ಸಿಡಿತಲೆಯನ್ನು ಹೊತ್ತೊಯ್ಯುವುದರ ಜೊತೆ 13-15 ಮ್ಯಾಕ್ ವೇಗದಲ್ಲಿ ಚಲಿಸುವು ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೇ 1,400 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ಛಿದ್ರಗೊಳಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ.