ಟೆಹ್ರಾನ್: ಪಶ್ಚಿಮ ಏಷ್ಯಾ ಕದನ ವಿರಾಮಕ್ಕೆ (Ceasefire) ಲೆಬನಾನ್ ಅಡ್ಡಿಯಾಗಿದೆ. ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಿನ್ನೆಯಷ್ಟೇ 2 ವಾರಗಳ ಕದನ ವಿರಾಮ ಏರ್ಪಟ್ಟಿತ್ತು. ಆದಾಗ್ಯೂ, ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಮೇಲೆ ಇಸ್ರೇಲ್ ದಾಳಿ ಮಾಡಿ, 250ಕ್ಕೂ ಹೆಚ್ಚು ಜನರನ್ನು ಕೊಂದಿದೆ.
ಲೆಬನಾನ್‌ನ ಮಧ್ಯ ಬೈರುತ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ (Israel AirStrike) ಮಾಡಿದೆ. ಇರಾನ್ ಪರವಾಗಿ ಯುದ್ಧಕ್ಕೆ ಇಳಿದ ಲೆಬನಾನ್‌ನ ಹೆಜ್ಬೊಲ್ಲಾ ತಾಣಗಳ ಮೇಲೆ ಇಸ್ರೇಲ್ 10 ನಿಮಿಷಗಳ ಕ್ಷಿಪಣಿ ಮಳೆ ಸುರಿಸಿದೆ. ಇದರಿಂದಾಗಿ, ಮಕ್ಕಳು ಸೇರಿದಂತೆ 254 ಜನ ಬಲಿಯಾಗಿದ್ದು, 1,200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕದನ ವಿರಾಮ ನಮಗಲ್ಲ ಅಂತ ಇಸ್ರೇಲ್ ರೌದ್ರಾವತಾರ ತಾಳಿದೆ. ಲೆಬನಾನ್‌ನಲ್ಲಿ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಕದನ ವಿರಾಮ ಬೆನ್ನಲ್ಲೇ ಇರಾನ್‍ಗೆ ಶೂಟೌಟ್ ಎಚ್ಚರಿಕೆ ರವಾನಿಸಿದ ಟ್ರಂಪ್

ಬೈರೂತ್‌ನಲ್ಲೇ 153 ಜನರು ಸಾವನ್ನಪ್ಪಿದ್ದು 950ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೀಗಾಗಿ, ರಾಷ್ಟ್ರೀಯ ಶೋಕ ದಿನಾಚರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿರುದ್ಧ ಕಿಡಿಕಾರಿರುವ ಇರಾನ್, ಮಾತುಕತೆಗೂ ಮುನ್ನವೇ ಕದನ ವಿರಾಮ ಉಲ್ಲಂಘನೆ, ಸಂಧಾನ ಪ್ರಯತ್ನ ಅರ್ಥಹೀನ ಎಂದಿದೆ. ಅಮೆರಿಕದ (America) ಇತಿಹಾಸವೇ ವಚನ ಭ್ರಷ್ಟತೆಯಿಂದ ಕೂಡಿದೆ. ಮಾತುಕತೆ ಅಥವಾ ದ್ವಿಪಕ್ಷೀಯ ಕದನ ವಿರಾಮದ ಬಗ್ಗೆ ಮಾತನಾಡುವುದು ಅರ್ಥಹೀನ ಅಂತ ಕಿಡಿಕಾರಿದೆ. ಇದನ್ನೂ ಓದಿ: ಇರಾನ್ ChatGPT ಬಳಸಿ ತಯಾರಿಸಿದ್ದ ಪ್ರಸ್ತಾವನೆಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ: JD Vance

ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಉಲ್ಲಂಘನೆ ಮಾಡಿದೆ ಅಂತ ಇಸ್ರೇಲ್ ಅಧ್ಯಕ್ಷರು ಕೆಂಡಕಾರಿದ್ಧಾರೆ. ಈ ಮಧ್ಯೆ, ನಾಳೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಸಂಧಾನ ಸಭೆ ಮೇಲೆ ಕಾರ್ಮೋಡ ಎದ್ದಿದೆ. ನಾಳಿನ ಸಭೆಯಲ್ಲಿ ಭಾಗಿ ಆಗೋ ಬಗ್ಗೆ ಹಾಕಿದ್ದ ಪೋಸ್ಟನ್ನು ಇರಾನ್ ಡಿಲೀಟ್ ಮಾಡಿದೆ. ಕದನ ವಿರಾಮದಿಂದ ಹಿಂದೆ ಸರಿಯೋ ಎಚ್ಚರಿಕೆ ಕೊಟ್ಟಿದೆ. ಇದರ ಮಧ್ಯೆಯೇ, ಬೈರೂತ್ ಮೇಲೆ ನಡೆಸಿದ ದಾಳಿಯಲ್ಲಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸೆಮ್ ಅವರ ವೈಯಕ್ತಿಕ ಕಾರ್ಯದರ್ಶಿ ಮತ್ತು ಸೋದರಳಿಯ ಅಲಿ ಯೂಸುಫ್ ಹರ್ಷಿಯನ್ನು ಇಸ್ರೇಲ್ ಕೊಂದಿದೆ. ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಹೆಜ್ಬುಲ್ಲಾ ರಾಕೆಟ್ ದಾಳಿ ನಡೆಸಿದೆ.

