ಕತಾರ್: ಅರಬ್ಬರ ನಾಡಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಫುಟ್‍ಬಾಲ್ (FootBall) ಟೂರ್ನಿ ವಿವಾದಗಳಿಂದ ಸದ್ದು ಮಾಡುತ್ತಿದೆ. ಇದೀಗ ಇರಾನ್ (Iran) ತಂಡ ತಮ್ಮ ದೇಶದ ರಾಷ್ಟ್ರಗೀತೆಯನ್ನು (National Anthem) ಹಾಡಲು ನಿರಾಕರಿಸಿ ಹೊಸ ವಿವಾದ ಹುಟ್ಟು ಹಾಕಿದೆ.
Advertisement
ಫಿಫಾ ವಿಶ್ವಕಪ್ ಕತಾರ್‌ನಲ್ಲಿ (Qatar) ಬಹಳ ಅದ್ಧೂರಿಯಾಗಿ ಆರಂಭ ಕಂಡಿದೆ. ಫುಟ್‍ಬಾಲ್ ಪಂದ್ಯದ ನಡುವೆ ಆನ್‍ಫೀಲ್ಡ್‌ನಲ್ಲಿ ಕಿತ್ತಾಟ ಸಾಮಾನ್ಯ ಆದರೆ ಕತಾರ್‌ನಲ್ಲಿ ಆನ್‍ಫೀಲ್ಡ್ ಮತ್ತು ಆಫ್‍ದೀಫೀಲ್ಡ್‌ನಲ್ಲಿ ಕೆಲ ವಿವಾದ ಹೆಚ್ಚು ಪ್ರಚಾರ ಕಂಡಿದೆ. ಇದೀಗ ಈ ವಿವಾದಕ್ಕೆ ಹೊಸ ಸೇರ್ಪಡೆ ಎಂಬಂತೆ ಇಂಗ್ಲೆಂಡ್ (England) ಹಾಗೂ ಇರಾನ್ ನಡುವಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ವಿವಾದ ಹುಟ್ಟಿಕೊಂಡಿದೆ. ಇರಾನ್ ಆಟಗಾರರು ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಾರೆ. ಫುಟ್‍ಬಾಲ್ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆ ಹಾಡಿಸುವುದು ನಿಯಮ. ಆದರೆ ಇರಾನ್ ಆಟಗಾರರು ತಮ್ಮ ದೇಶದ ರಾಷ್ಟ್ರಗೀತೆ ಹಾಡದೇ ಪ್ರತಿಭಟಿಸಿದ್ದಾರೆ. ಇದನ್ನೂ ಓದಿ: ಹಿಂದಿನ ಎಲ್ಲ ಆದಾಯದ ದಾಖಲೆಗಳನ್ನು ಮುರಿಯಲಿದೆ ಈ ಬಾರಿಯ ಫಿಫಾ ಫುಟ್ಬಾಲ್ ವಲ್ಡ್ ಕಪ್
Advertisement
Advertisement
ಇರಾನ್‍ನಲ್ಲಿ ನಡೆಯುತ್ತಿರುವ ಹಿಜಬ್ (Hijab) ವಿರುದ್ಧ ಪ್ರತಿಭಟನೆ ಬೆಂಬಲಿಸಿ ಇರಾನ್ ಫುಟ್‍ಬಾಲ್ ತಂಡ ಈ ನಿರ್ಧಾರ ತೆಗೆದುಕೊಂಡಿದೆ. ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡದೇ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಫುಟ್‍ಬಾಲ್ ತಂಡದ ನಾಯಕ ಅಲಿರೆಜಾ ಜಹಾನ್‍ಬಕ್ಷ್, ನಾವು ರಾಷ್ಟ್ರಗೀತೆ ಹಾಡದಿರಲು ನಿರ್ಧರಿಸಿದ್ದೇವೆ. ಇರಾನ್‍ನಲ್ಲಿ ನಡೆಯತ್ತಿರುವ ಹಿಜಬ್ ವಿರುದ್ಧದ ಪ್ರತಿಭಟನೆ ಬೆಂಬಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್
Advertisement
Breaking: Iran national football club stand mournfully and refuse to sing national anthem of clerical regime during first match against England at World Cup 2022 in act of protest against Khamenei henchmen’s violence pic.twitter.com/qPmX2hdMKP
— Borzou Daragahi ???????? (@borzou) November 21, 2022
ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಸೆ.16 ರಂದು ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ನಂತರ ಆಕೆ ಸಾವಿಗೀಡಾದಳು. ಇರಾನ್‍ನ ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂತು. ಇದರ ಬೆನ್ನಲ್ಲೇ ಯುವತಿ ಸಾವು ಹಾಗೂ ಹಿಜಬ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತೀವ್ರ ಸ್ವರೂಪ ಪಡೆದಿದ್ದು, ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.