ನವದೆಹಲಿ: ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ಭಾರತದ ಎಚ್ಚರಿಕೆ ನೀಡಿದ ಬೆನ್ನಲ್ಲೇ ನೆರೆಯ ಇರಾನ್ ಸಹ ಎಚ್ಚರಿಕೆ ನೀಡಿದೆ. ಉಗ್ರಗಾಮಿ ಸಂಘಟನೆಗಳನ್ನು ಹತ್ತಿಕ್ಕದ್ದಿದ್ದರೆ ಪಾಕ್‍ನೊಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಇರಾನ್ ಜನರಲ್ ಖಾಸಿಂ ಸೊಲೈಮಾನಿ ಹೇಳಿದ್ದಾರೆ.
ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ಏರ್ ಸ್ಟ್ರೈಕ್ ಮಾಡಿ ಎಚ್ಚರಿಕೆ ರವಾನಿಸಿತ್ತು. ಇದರ ನಡುವೆಯೇ ಹಲವು ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದವು. ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿ ಕ್ರಮಕೈಗೊಳ್ಳುವ ಬಗ್ಗೆಯೂ ತಿಳಿಸಿದ್ದವು.
ಸದ್ಯ ಇರಾನ್ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಹೋಗಿದ್ದು, ನೆರೆಯ ರಾಷ್ಟ್ರಗಳ ಜೊತೆ ನಿಮ್ಮ ಬಾಂಧವ್ಯ ಹೇಗಿದೆ ಎಂಬುವುದು ಗೊತ್ತಿದೆ. ಎಲ್ಲಿ ನೋಡಿದರೂ ಅಶಾಂತಿ ಸೃಷ್ಟಿಸುವುದೇ ನಿಮ್ಮ ಕಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದು, ಪಾಕ್ ಜೊತೆ ತಾನು ಹೊಂದಿರುವ ಗಡಿ ಪ್ರದೇಶದಲ್ಲಿ ಬೃಹತ್ ಗೋಡೆ ನಿರ್ಮಿಸುವ ಇರಾನ್ ಸಂಸತ್‍ನಲ್ಲೂ ಪ್ರಸ್ತಾಪವಾಗಿದೆ.
ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಇರಾನ್‍ನಲ್ಲೂ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದು, ಒಂದೊಮ್ಮೆ ನೀವು ಕ್ರಮಕೈಗೊಳ್ಳಲಿದ್ದಾರೆ ನಾವೇ ಉಗ್ರರ ನೆಲೆಗಳನ್ನು ನಾಶ ಪಡಿಸುತ್ತೇವೆ. ನಮ್ಮ ನಿರ್ಣಯಗಳನ್ನು ಪರೀಕ್ಷೆ ಮಾಡಲು ಮುಂದಾಗ ಬೇಡಿ. ನಿಮ್ಮ ಉಪಟಳದಿಂದ ತೊಂದರೆಗೆ ಒಳಗಾದದ ಒಂದೇ ಒಂದು ನೆರೆ ದೇಶವೂ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದೆ.
ಇತ್ತ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನದ ಮೇಲೆ ಕಿಡಿಕಾರಿದ್ದು, ನಮ್ಮ ದೇಶವನ್ನು ನಾಶ ಮಾಡಲೇ ಬೇಕು ಎಂದು ಉಗ್ರ ಗುಂಪುಗಳನ್ನು ಪಾಕ್ ಬೆಳೆಸುತ್ತಿದೆ. ಬಾಲಾಕೋಟ್ ಮೇಲೆ ಭಾರತ ಮತ್ತಷ್ಟು ದಾಳಿ ನಡೆಸಬೇಕಿತ್ತು ಎಂದು ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ರಹಮತುಲ್ಲಾ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv