ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

Advertisements

ಟೆಹರಾನ್‌: ಇರಾನ್‌ನಲ್ಲಿ ಹಿಜಬ್‌(Iran Hijab  Protests) ವಿರುದ್ಧದ ಪ್ರತಿಭಟನೆ ತೀವ್ರವಾಗಿದ್ದು ಈಗ ಹೋರಾಟಕ್ಕೆ ಶಾಲಾ ವಿದ್ಯಾರ್ಥಿನಿಯರು ಧುಮುಕಿದ್ದಾರೆ.

Advertisements

ಇಲ್ಲಿಯವರೆಗೆ ಮಹಿಳೆಯರು ಮತ್ತು ಯುವತಿಯರು ಪ್ರತಿಭಟಿಸುತ್ತಿದ್ದರು. ಆದರೆ ಮಂಗಳವಾರದಿಂದ ಶಾಲಾ ಮಕ್ಕಳು ಭಾಗಿಯಾಗಿದ್ದು ನಡು ಬೀದಿಯಲ್ಲಿ ಹಿಜಬ್‌ ತೆಗೆದು ಪ್ರತಿಭಟನೆ ಮಾಡಿದ್ದಾರೆ.

Advertisements

ಇನ್ನೊಂದು ಕಡೆ ಹಿಜಬ್‌ ಧರಿಸದೇ ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಶಾಲೆಯ(School) ಡೈರೆಕ್ಟರ್‌ ಡಿಬಾರ್‌ ಮಾಡಿದ್ದಾನೆ. ಇದಕ್ಕೆ ಸಿಟ್ಟಾದ ಮಕ್ಕಳು ಪ್ರತಿಭಟನೆ ನಡೆಸಿ ನೀರಿನ ಬಾಟಲಿಯನ್ನು ಎಸೆದಿದ್ದಾರೆ. ಮಕ್ಕಳ ಪ್ರತಿಭಟನೆ ಜೋರಾಗುತ್ತಿದ್ದಂತೆ  ಸ್ಥಳದಿಂದಲೇ ಡೈರೆಕ್ಟರ್‌ ಓಡಿ ಹೋಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

ನಾವು ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲ ಒಂದಾಗಿದ್ದೇವೆ. ಒಬ್ಬೊಬ್ಬರಾಗಿ ಸಾಯಲು ನಾವು ಸಿದ್ಧ ಎಂದು ಇರಾನ್‌ ಸರ್ಕಾರದ ವಿರುದ್ಧ ಬಾಲಕಿಯರು ಘೋಷಣೆ ಕೂಗುತ್ತಿದ್ದಾರೆ.

Advertisements

ರಾಜದಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸ್ ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಇರಾನ್‌ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದಾರೆ.

ಸರ್ಕಾರ ಬಲವಂತ ಮಾಡಿ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೂ ದಿನೇ ದಿನೇ ಹಿಜಬ್‌ ವಿರುದ್ಧದ ಹೋರಾಟ ಜಾಸ್ತಿಯಾಗುತ್ತಿದ್ದು ವಿಶ್ವಾದ್ಯಂತ ಇರಾನ್‌ ಮಹಿಳೆಯರಿಗೆ ಬೆಂಬಲ ವ್ಯಕ್ತವಾಗುತ್ತಿದೆ.

Live Tv

Advertisements
Exit mobile version