ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್‌

Public TV
1 Min Read
indian students in iran

ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ (Israel Iran Conflict) ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಭಾರತೀಯರ ರಕ್ಷಣೆಗಾಗಿ ಇರಾನ್‌ ತನ್ನ ವಾಯುನೆಲೆಯನ್ನು ತೆರೆದಿದೆ.

ಇರಾನ್ ತನ್ನ ಮುಚ್ಚಿದ ವಾಯುನೆಲೆಯನ್ನು ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳಿಗಾಗಿ ತೆರೆದಿದೆ. ಸಂಘರ್ಷ ಪೀಡಿತ ಇರಾನಿನ ನಗರಗಳಲ್ಲಿ ಸಿಲುಕಿರುವ ಕನಿಷ್ಠ 1,000 ಭಾರತೀಯ ವಿದ್ಯಾರ್ಥಿಗಳನ್ನು ‘ಆಪರೇಷನ್‌ ಸಿಂಧು’ ಹೆಸರಲ್ಲಿ ಸರ್ಕಾರ ಸ್ಥಳಾಂತರಿಸಲು ಮುಂದಾಗಿದ್ದು, ಇನ್ನೆರಡು ದಿನದಲ್ಲಿ ವಿಮಾನವು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಇರಾನ್‌ – ಇಸ್ರೇಲ್‌ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ

iran israel war

ಮೊದಲ ವಿಮಾನ ಇಂದು ರಾತ್ರಿ 11 ಗಂಟೆಗೆ ಇಳಿಯಲಿದೆ. ಎರಡನೇ ಮತ್ತು ಮೂರನೇ ವಿಮಾನಗಳು ಶನಿವಾರ ಬೆಳಗ್ಗೆ ಒಂದು ಮತ್ತು ಸಂಜೆ ಇನ್ನೊಂದು ವಿಮಾನಗಳು ಹಾರಾಟ ನಡೆಸಲಿವೆ.

ಇಸ್ರೇಲ್‌ ಮತ್ತು ಇರಾನ್‌ ಪರಸ್ಪರರ ಮೇಲೆ ಕ್ಷಿಪಣಿ, ಡ್ರೋನ್‌ ದಾಳಿಗಳನ್ನು ನಡೆಸುತ್ತಿವೆ. ಪರಿಣಾಮವಾಗಿ ಇರಾನಿನ ವಾಯುಪ್ರದೇಶವು ಹೆಚ್ಚಿನ ಅಂತರರಾಷ್ಟ್ರೀಯ ವಿಮಾನಗಳಿಗೆ ಮುಚ್ಚಿವೆ. ಭಾರತವು ತನ್ನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಇರಾನ್ ವಿಶೇಷ ಕಾರಿಡಾರ್ ಅನ್ನು ನೀಡಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್‌

ಇಸ್ರೇಲ್ ಜೊತೆಗಿನ ಪರ್ಷಿಯನ್ ಕೊಲ್ಲಿ ರಾಷ್ಟ್ರದ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಬುಧವಾರ ‘ಆಪರೇಷನ್ ಸಿಂಧು’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕೆಲವು ವಿದ್ಯಾರ್ಥಿಗಳು ಗಾಯಗೊಂಡ ನಂತರ ದೆಹಲಿಯಲ್ಲಿರುವ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Share This Article