ನವದೆಹಲಿ: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಸಿಲುಕಿದೆ. ಭಾರತ ಅಫ್ಘಾನಿಸ್ತಾನಕ್ಕೆ ನೆರವು ನೀಡುತ್ತಿದ್ದು, ಇದೀಗ ಭಾರತದೊಂದಿಗೆ ಇರಾನ್ ಕೈ ಜೋಡಿಸಲು ಮುಂದಾಗಿದೆ.
ಭಾರತ ಅಫ್ಘಾನಿಸ್ತಾನಕ್ಕೆ ಕೋವಿಡ್-19 ಲಸಿಕೆಗಳು, ಗೋಧಿ ಹಾಗೂ ಔಷಧೀಯ ವಸ್ತುಗಳನ್ನು ರವಾನಿಸಲು ಮುಂದಾಗುತ್ತಿದೆ. ಈಗಾಗಲೇ ದೇಶ 2 ಬಾರಿ ವಿಮಾನದ ಮೂಲಕ ಕೋವಿಡ್ ಲಸಿಕೆಗಳನ್ನು ರವಾನಿಸಿದೆ. ಪಾಕಿಸ್ತಾನದ ಮಾರ್ಗದ ಮೂಲಕ ಅಫ್ಘಾನಿಸ್ತಾನಕ್ಕೆ ಆಹಾರ ಪದಾರ್ಥಗಳನ್ನೂ ವಿತರಿಸುವ ಯೋಜನೆ ನಡೆಸಿದೆ.
Advertisement
Advertisement
ಭಾರತದ ಈ ಮಾನವೀಯ ನೆರವಿಗೆ ಇದೀಗ ಇರಾನ್ ಸಹಾಯ ಮಾಡಲು ಮುಂದಾಗಿದೆ. ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಶನಿವಾರ ದೂರವಾಣಿ ಕರೆಯಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿರುವುದಾಗಿ ಇರಾನ್ ಅಂತರಾಷ್ಟ್ರೀಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!
Advertisement
ಇರಾನ್ – ಅಫ್ಘಾನಿಸ್ತಾನದಲ್ಲಿ 920 ಕಿ.ಮೀ.ನ ಗಡಿ ಹೊಂದಿದೆ. ಭಾರತ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಸಾಗಿಸಲು ಪಾಕಿಸ್ತಾನದ ಮಾರ್ಗವಾಗಿ ಹೋಗಬೇಕಾಗುತ್ತದೆ. ಆದರೆ ಭಾರತ ಪಾಕಿಸ್ತಾನದ ವೈರತ್ವ ಇದಕ್ಕೆ ಅಡ್ಡಿಪಡಿಸುತ್ತಿದೆ.
Advertisement
ಇದೀಗ ಭಾರತ ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ನೆರವಿಗೆ ಇರಾನ್ ಕೈ ಜೋಡಿಸುವುದಾಗಿ ಹೇಳಿದೆ. ಭಾರತ ಸರಕುಗಳನ್ನು ಸಮುದ್ರಮಾರ್ಗವಾಗಿ ಇರಾನ್ ತಲುಪಿಸಿದರೆ ಸುಲಭವಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸಲು ಸಾಧ್ಯವಾಗಲಿದೆ. ಇದನ್ನೂ ಓದಿ: ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ
ಭಾರತ 2022ರ ಹೊಸ ವರ್ಷದ ದಿನದಂದೇ 5 ಲಕ್ಷ ಕೋವಿಡ್-19 ಲಸಿಕೆಗಳನ್ನು ವಿಮಾನದ ಮೂಲಕ ಕಾಬುಲ್‌ಗೆ ಕಳುಹಿಸಿತ್ತು. ಇದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಭಾರತ ಕಳುಹಿಸಿದ ಎರಡನೇ ಸಹಾಯವಾಗಿದೆ.