ತೆಹ್ರಾನ್: ಹಮಾಸ್ ಮತ್ತು ಇಸ್ರೇಲ್ (Israel) ಯುದ್ಧ ನಡುವೆಯೇ ಇರಾನ್ (Iran) ಸೇನೆಯು ಇಸ್ರೇಲ್ ಮೇಲೆ ನೂರಾರು ಸಂಖ್ಯೆಯಲ್ಲಿ ಡ್ರೋನ್‌ಗಳ ದಾಳಿ ನಡೆಸಿದೆ. ಈ ಬೆಳವಣಿಗೆ ಮತ್ತಷ್ಟು ಭೀತಿ ಹುಟ್ಟುಹಾಕಿದೆ.
ಇರಾನ್‌ನಿಂದ ಇಸ್ರೇಲ್‌ನತ್ತ 100 ಕ್ಕೂ ಹೆಚ್ಚು ಡ್ರೋನ್‌ಗಳು ಹಾರುತ್ತಾ ಧಾವಿಸಿರುವುದು ಕಂಡುಬಂದಿದೆ ಎಂದು ಇಸ್ರೇಲ್ ಮಿಲಿಟರಿ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್
Advertisement
Advertisement
ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿದಂತೆ 7 ಮಂದಿ ಸೇನಾಧಿಕಾರಿಗಳು ಹತರಾಗಿದ್ದರು.
Advertisement
ಇದಕ್ಕೆ ಪ್ರತೀಕಾರವಾಗಿ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಇಸ್ರೇಲ್ ಈ ವೈಮಾನಿಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದನ್ನೂ ಓದಿ: ಇರಾನ್ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ
Advertisement
ಇರಾನ್ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮುನ್ಸೂಚನೆ ನೀಡಿದ್ದರು. ಇಸ್ರೇಲ್ ರಕ್ಷಣೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದರು.