ಬೆಂಗಳೂರು: ಇಸ್ರೇಲ್-ಇರಾನ್ (Isreal-Iran) ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ (Narendra Modi) ಹಿರಿಯ ಸಚಿವರು ಮತ್ತು ಅಧಿಕಾರಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಹರಿಸಲು ಸೂಚನೆ ನೀಡಿದ್ದಾರೆ. ಈ ಮಧ್ಯೆ, ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಯಿಂದ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರು ಮಾತನಾಡಿದ್ದು, ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಮಾತನಾಡಿ, ವಾರ್ ವೇಳೆ 12 ಗಂಟೆಗಳು ವಿಮಾನದಲ್ಲೇ ಸಿಲುಕಿದ್ವಿ. ವಿಮಾನದ ಲೈಟ್ಸ್ ಆಫ್ ಮಾಡಿದ್ರು. ಯಾವ ಕ್ಷಣದಲ್ಲಿ ಮಿಸೈಲ್ ಬೀಳುತ್ತೋ ಅನ್ನೋ ಆತಂಕದಲ್ಲಿದ್ವಿ. ನಾನು ಸುಮಾರು 24 ದೇಶ ಸುತ್ತಿದ್ದೇನೆ. ಇದು ಮೊದಲನೇ ಅನುಭವವಾಗಿದೆ. ವಿಮಾನದಲ್ಲಿರುವ ನಮ್ಮೆಲ್ಲರಿಗೂ ಆತಂಕ ಆಗಿತ್ತು. ಏನಾಗುತ್ತೋ ಎಂದು ತಿಳಿದಿರಲಿಲ್ಲ. ಎಲ್ಲಾ ಇಸ್ರೇಲ್-ಇರಾನ್ ಮಧ್ಯದಲ್ಲೇ ನಾವು ಬರಬೇಕಾಗಿತ್ತು. ಬೇರೆ ದಾರಿ ಇರಲಿಲ್ಲ ಎಂದರು. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ
ವಿಷಯ ತಿಳಿದ ಸುಮಾರು ಒಂದು ಗಂಟೆ ಕಳೆದ ಮೇಲೆ ನನ್ನ ಫೋನ್‌ಗೆ ಸ್ವಲ್ಪ ರೇಂಜ್ ಬಂತು. ಆ ಸಂದರ್ಭದಲ್ಲಿ ನನಗೆ ನೆನಪಾಗಿದ್ದು ನಮ್ಮೂರಿನ ʻಪಬ್ಲಿಕ್ ಟಿವಿʼ. ತಕ್ಷಣ ನಾನು ಪಬ್ಲಿಕ್ ಟಿವಿಯ ಪ್ರಕಾಶ್ ಎಂಬವರಿಗೆ ಸಂದೇಶ ಕಳುಹಿಸಿದೆ. ಅವರು ತಕ್ಷಣ ಸ್ಪಂದಿಸಿ ನನಗೆ ಧೈರ್ಯ ತುಂಬಿದರು. ಆಗ ನಮಗೆ ಇನ್ನು ಸ್ವಲ್ಪ ಜಾಸ್ತಿ ಧೈರ್ಯ ಬಂತು. ಇದನ್ನೂ ಓದಿ: ಎಲ್ಲರೂ ಒಟ್ಟಾಗಿ ಇಸ್ರೇಲ್ ಸೋಲಿಸೋಣ – ಇರಾನ್ ಸುಪ್ರೀಂ ಲೀಡರ್ ಕರೆ
ನಾವು ಸುಮಾರು 6 ಗಂಟೆಗಳಲ್ಲಿ ತಲುಪಬೇಕಿದ್ದ ದುಬೈಯನ್ನು 12 ತಾಸುಗಳಲ್ಲಿ ತಲುಪಿದ್ದೇವೆ. ನನ್ನ ಜೀವನದಲ್ಲಿ ಸುತ್ತಿದ 24 ದೇಶಗಳಲ್ಲಿ 14 ಗಂಟೆ ಉಪವಾಸ ಇದ್ದಿದ್ದು ಇದೇ ಮೊದಲನೇ ಬಾರಿ. ನಮ್ಮ ಮಾಧ್ಯಮ ಮಿತ್ರರಿಗೆ ನಾನು ಧನ್ಯವಾದ ಹೇಳೋದಕ್ಕೆ ಬಯಸುತ್ತೇನೆ ಎಂದು ತಮ್ಮ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್