Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮೆರಿಕ ದಾಳಿಗೆ ಇರಾನ್‌ ಪ್ರತಿತಂತ್ರ – 700 ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಹಾರ್ಮೂಜ್ ಜಲಸಂಧಿಯಲ್ಲೇ ಲಾಕ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಮೆರಿಕ ದಾಳಿಗೆ ಇರಾನ್‌ ಪ್ರತಿತಂತ್ರ – 700 ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಹಾರ್ಮೂಜ್ ಜಲಸಂಧಿಯಲ್ಲೇ ಲಾಕ್‌

Latest

ಅಮೆರಿಕ ದಾಳಿಗೆ ಇರಾನ್‌ ಪ್ರತಿತಂತ್ರ – 700 ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಹಾರ್ಮೂಜ್ ಜಲಸಂಧಿಯಲ್ಲೇ ಲಾಕ್‌

Public TV
Last updated: March 4, 2026 5:14 am
Public TV
Share
3 Min Read
Strait of Hormuz closed india oil
SHARE

– 4 ವಾರಕ್ಕಿಂತ ಹೆಚ್ಚು ಸಂಘರ್ಷ ನಡೆದ್ರೆ ಭಾರತಕ್ಕೆ ಸಂಕಷ್ಟ ಸಾಧ್ಯತೆ

ಟೆಹ್ರಾನ್‌: ಇರಾನ್ ಮೇಲೆ ಇಸ್ರೇಲ್ (Iran vs Israel) ಹಾಗೂ ಅಮೆರಿಕದ ದಾಳಿ ತೀವ್ರ ಸ್ವರೂಪವನ್ನ ಪಡೆದುಕೊಳ್ಳುತ್ತಿದೆ. ಸದ್ಯಕ್ಕಂತೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕಂದ್ರೆ 4 ವಾರಗಳ ದಾಳಿಗೆ ಅಮೆರಿಕ ಪ್ಲ್ಯಾನ್‌ ಮಾಡಿಕೊಂಡಿದೆ. ಮೊನ್ನೆ ಟ್ರಂಪ್ ಕೂಡ ಅದನ್ನೇ ಉಚ್ಚರಿಸಿದ್ರು. ಇರಾನ್ ಮೇಲೆ ದಾಳಿ ನಮಗೆ ಬೋರ್ ಆಗುತ್ತಿಲ್ಲ. 4-5 ವಾರಗಳವರೆಗೂ ದಾಳಿ ಮುಂದುವರಿಯಲಿದೆ ಎಂದಿದ್ರು.

ಇದರ ಪ್ರತಿತಂತ್ರದ ಭಾಗವಾಗಿ ಹಾರ್ಮೂಜ್‌ ಜಲಸಂಧಿಯನ್ನ (Hormuz Strait) ಇರಾನ್ ಮುಚ್ಚಿದೆ. ಇತ್ತ ಇರಾನ್ ನಿರ್ಧಾರದಿಂದ ಭಾರತದ ಸೇರಿ ಹಲವು ದೇಶಗಳಿಗೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತಯವಾಗುವ ಸಾಧ್ಯತೆ ದಟ್ಟವಾಗಿದೆ. ಪೆಟ್ರೋಲ್, ಡಿಸೇಲ್ ಕೊರತೆ. ಎಲ್‌ಪಿಜಿ ಗ್ಯಾಸ್‌ಗೂ ಬರಗಾಲ ಎದುರಾಗುವ ಆತಂಕವೂ ಮನೆ ಮಾಡಿದೆ.

crude oil

700 ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಲಾಕ್‌
ಅಮೆರಿಕ ಮತ್ತು ಅಮೆರಿಕ (USA) ಮಿತ್ರ ರಾಷ್ಟ್ರಗಳಿಗೆ ತಿರುಗೇಟು ಕೊಡಲು ಇರಾನ್‌ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹಾರ್ಮೂಜ್‌ ಜಲಸಂಧಿಯನ್ನೇ ಮುಚ್ಚಿದೆ. ಇದರಿಂದ ಇರಾನಿಯೇತರ 700ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು (Fuel Tanker) ಜಲಸಂಧಿಯಲ್ಲೇ ಲಾಕ್‌ ಆಗಿವೆ. ಇದು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಂಡ್‌ವರ್ಡ್ ಮತ್ತು ಕೆಪ್ಲರ್‌ನ ಕಡಲ ವಿಶ್ಲೇಷಣಾ ಸಂಸ್ಥೆಗಳ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ 1 ರಂದು 28 ಲಕ್ಷ ಬ್ಯಾರಲ್‌ಲ್‌ ತೈಲ ಹೊತ್ತ ಮೂರು ಟ್ಯಾಂಕರ್‌ಗಳು ಹಾರ್ಮೂಜ್‌ ಜಲಸಂಧಿಯನ್ನ ದಾಟಿದ್ದವು. ಆದರೂ ಇದು ಪ್ರಸಕ್ತ ವರ್ಷದಲ್ಲಿ ದೈನಂದಿನ ಸರಾಸರಿಗಿಂತ ಶೇ.86 ರಷ್ಟು ಕಡಿಮೆಯಾಗಿತ್ತು. ಮಾರ್ಚ್‌ 2 ರ ಆರಂಭದ ವೇಳೆಗೆ ಒಂದು ಸಣ್ಣ ಟ್ಯಾಂಕರ್‌ ಮತ್ತು ಒಂದು ಸಣ್ಣ ಸರಕು ಹಡಗು ಮುಖ್ಯ ಲೇನ್‌ ಮೂಲಕ ಚಲಿಸಿದೆ. ಅದಾದ ಬಳಿಕ ಉಳಿದ ಟ್ಯಾಂಕರ್‌ಗಳು ಜಲಸಂಧಿಯಲ್ಲೇ ಲಾಕ್‌ ಆಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

325702249 1 6 1 e1566118011669

ತೈಲ ಮಾರ್ಗದಲ್ಲಿ ಒಟ್ಟು 706 ತೈಲ ಟ್ಯಾಂಕರ್‌ಗಳು ಎರಡೂ ಬದಿಗಳಲ್ಲಿ ಲಾಕ್‌ ಆಗಿವೆ. ಈ ಪೈಕಿ 334 ಕಚ್ಚಾ ವಾಹಕಗಳು, 109 ಮಂದ (ಕೊಳಕು) ಉತ್ಪನ್ನ ಟ್ಯಾಂಕರ್‌ಗಳು ಮತ್ತು 263 ಶುದ್ಧ ಉತ್ಪನ್ನ ಹಡಗುಗಳು ಸ್ಥಗಿತಗೊಂಡಿವೆ ಎಂದು ವರದಿಗಳು ತಿಳಿಸಿವೆ.

ಭಾರತದ ಬಳಿ ಕಚ್ಚಾತೈಲದ ಸ್ಟಾಕ್ ಎಷ್ಟಿದೆ?
ಭಾರತವು ಶೇ. 55 ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದು, 50% ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳಿಂದ ಬರುತ್ತಿದೆ. ಅರ್ಧದಷ್ಟು ಕಚ್ಚಾತೈಲ ಹಾರ್ಮೂಜ್‌ ಜಲಸಂಧಿಯಿಂದಲೇ ಸಪ್ಲೈ ಆಗಬೇಕು. ಭಾರತ ಪ್ರಸ್ತುತ 25-45 ದಿನಗಳಿಗಾಗುವಷ್ಟು ಕಚ್ಚಾತೈಲ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳು ಸಾಕಷ್ಟು ಇದೆ. ದೇಶವು 25-30 ದಿನಗಳ ಎಲ್‌ಪಿಜಿ ಸಂಗ್ರಹ ಹೊಂದಿದೆ. ಭಾರತದ ಬಳಿ ಸುಮಾರು 10 ಕೋಟಿ ಬ್ಯಾರೆಲ್‌ಗಳಿವೆ. ಇದು 40 ರಿಂದ 45 ದಿನಗಳ ಅಗತ್ಯಗಳನ್ನ ಪೂರೈಸಬಲ್ಲದು. ಒಂದು ವೇಳೆ 4 ವಾರಕ್ಕಿಂತ ಹೆಚ್ಚು ಸಂಘರ್ಷ ನಡೆದ್ರೆ ಭಾರತಕ್ಕೆ ಸಂಕಷ್ಟ ಸಾಧ್ಯತೆ ಇದೆ. ಈ ಮಧ್ಯೆ ಆಮದು ವೆಚ್ಚ ಹೆಚ್ಚಿದರೂ ತಾತ್ಕಾಲಿಕವಾಗಿ ಬೆಲೆ ಹೆಚ್ಚಿಸದಿರಲು ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ.

ವಿಮಾನಗಳ ಹಾರಾಟ ಶುರು
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಹೆಚ್ಚುತ್ತಿರುವ ಮಧ್ಯೆ ವಿಮಾನಗಳ ಹಾರಾಟಗಳು ಶುರುವಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ಒಟ್ಟು 58 ವಿಮಾನಗಳ ಕಾರ್ಯ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, 30 ಇಂಡಿಗೋ ವಿಮಾನಗಳು, 23 ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಇಲ್ಲಿಯವರೆಗೆ, 1,221 ಭಾರತೀಯ ಮತ್ತು 388 ಅಂತಾರಾಷ್ಟ್ರೀಯ ವಿಮಾನಗಳನ್ನ ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಕತಾರ್‌ಗೆ ಹೆಚ್ಚಿನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ದರಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸಹಾಯ ಮಾಡಲು ಸರ್ಕಾರ ಸೂಚನೆಗಳನ್ನು ನೀಡಿದೆ.

Israel Iran airstrikes

ಯುಎಇ ಮೇಲೆ ನಡೆದ ದಾಳಿಯೆಷ್ಟು..?
> ಯುಎಇ ಮೇಲೆ 812 ಇರಾನ್ ಡ್ರೋಣ್‌ಗಳ ದಾಳಿ
> ಅದರಲ್ಲಿ 755 ಡ್ರೋಣ್‌ಗಳ ತಡೆ ಹಿಡಿಯಲಾಗಿದೆ
> ಇರಾನ್‌ನ 57 ಡ್ರೋಣ್‌ಗಳು ಯುಎಇ ಮೇಲೆ ಬಿದ್ದಿವೆ
> 8 ಕ್ರೂಸ್ ಕ್ಷಿಪಣಿಗಳ ಗುರುತಿಸಿ.. ತಡೆಹಿಡಿಯಲಾಗಿದೆ
> 186 ಬ್ಯಾಲಿಸ್ಟಿಕ್ ಮಿಸೈಲ್‌ಗಳಿಂದ ದಾಳಿ
> 172 ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ
> 13 ಬ್ಯಾಲಿಸ್ಟಿಕ್ ಕ್ಷಿಪಣಿ ಸಮುದ್ರಕ್ಕೆ ಬಿದ್ದಿವೆ
> 1 ಕ್ಷಿಪಣಿ ಮಾತ್ರ ಯುಎಇ ದೇಶದ ಮೇಲೆ ಬಿದ್ದಿದೆ

ಕತಾರ್ ಮೇಲೆ ನಡೆದ ದಾಳಿಯೆಷ್ಟು..?
> 2 ಇರಾನಿಯರ್ ಎಸ್‌ಯು ಏರ್‌ಕ್ರಾಫ್ಟ್ ಉಡೀಸ್
> 3 ಕ್ರೂಸ್ ಕ್ಷಿಪಣಿ.. 101 ಬ್ಯಾಲಿಸ್ಟಿಕ್ ಕ್ಷಿಪಣಿ ಪತ್ತೆ
> 101 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ
> 39 ಡ್ರೋಣ್‌ಗಳಿಂದ ದಾಳಿ.. 24 ಡ್ರೋಣ್‌ಗಳ ತಡೆಹಿಡಿಲಾಗಿದೆ

ಬಹ್ರೇನ್‌ ಮೇಲೆ ನಡೆದ ದಾಳಿಯೆಷ್ಟು..?
> 70 ಕ್ಷಿಪಣಿಗಳ ದಾಳಿ.. ಎಲ್ಲವನ್ನೂ ತಡೆಹಿಡಿಯಲಾಗಿದೆ
> 76 ಡ್ರೋಣ್‌ಗಳ ದಾಳಿ.. ಎಲ್ಲವನ್ನೂ ತಡೆಹಿಡಿಯಲಾಗಿದೆ.

TAGGED:Crude OilFuel TankerHormuz StraitindiaIran Israel Warಅಮೆರಿಕಕಚ್ಚಾತೈಲತೈಲ ಟ್ಯಾಂಕರ್‌ಭಾರತಹಾರ್ಮುಜ್ ಜಲಸಂಧಿ
Share This Article
Facebook Whatsapp Whatsapp Telegram

Cinema news

Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World
Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National

You Might Also Like

KSRTC Bus Transport bus catches fire in front of Lulu Mall Bengaluru
Bengaluru City

ಲುಲು ಮಾಲ್‌ ಮುಂದೆ ಹೊತ್ತಿ ಉರಿದ ಬೆಂಗಳೂರು-ಶಿವಮೊಗ್ಗ KSRTC ಬಸ್‌

Public TV
By Public TV
6 hours ago
Accident
Crime

ಬಸ್, ಪಿಕಪ್ ನಡುವೆ ಭೀಕರ ಅಪಘಾತ – 10 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

Public TV
By Public TV
6 hours ago
Donald Trump 2
Latest

ಪಾಕ್‌ ಧ್ವಜ ಇರುವ 10 ತೈಲ ಟ್ಯಾಂಕರ್‌ಗಳನ್ನು ಇರಾನ್‌ ನಮಗೆ ಗಿಫ್ಟ್‌ ನೀಡಿದೆ: ಟ್ರಂಪ್‌

Public TV
By Public TV
6 hours ago
Nelamangala Assistant Professor Propose to Student
Bengaluru City

ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಅರೆಸ್ಟ್

Public TV
By Public TV
7 hours ago
Mudigere Police Station
Chikkamagaluru

ಮೂಡಿಗೆರೆ ಲವ್ ಜಿಹಾದ್ ಆರೋಪ ಪ್ರಕರಣ – 1 ತಿಂಗಳು ಉಪವಾಸ, ಮನೆಯಲ್ಲೇ ನಮಾಜ್ ಮಾಡುತ್ತಿದ್ದ ಅಪ್ರಾಪ್ತೆ

Public TV
By Public TV
7 hours ago
Donald Trump 1 2
Latest

ಅಲಿ ಖಮೇನಿ ನಮ್ಮೊಂದಿಗೆ ಇಲ್ಲ, ಇರಾನ್‌ನಲ್ಲಿ ಈಗ ನಾಯಕರೇ ಇಲ್ಲ: ಟ್ರಂಪ್‌

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?