ಮುಂಬೈ: ನಿರೀಕ್ಷೆಯಂತೆ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ (Investors) ಸಂಪತ್ತು ಒಂದೇ ದಿನದಲ್ಲಿ 10 ಲಕ್ಷ ಕೋಟಿ ರೂ. ಕರಗಿದೆ.
ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 10 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ
Advertisement
Advertisement
ಯಾವುದು ಎಷ್ಟು ಇಳಿಕೆ?
ಸೆನ್ಸೆಕ್ಸ್ 1,769.19 (-2.10%) ಅಂಕ ಕುಸಿದು 82.497.1ರಲ್ಲಿ ಕೊನೆಯಾಯಿತು. ನಿಫ್ಟಿ 50 546.80(-2.12%) ಇಳಿಕೆಯಾಗಿ 25,250.1ರಲ್ಲಿ ಮುಕ್ತಾಯಗೊಳಿಸಿತು. ನಿಫ್ಟಿ ಮಿಡ್‌ಕ್ಯಾಪ್ 100 1,333.60 (-2.04%) ಅಂಕ ಕುಸಿದು 59,024.7 ರಲ್ಲಿ ಕೊನೆಯಾಯಿತು. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ದಸರಾಗೆ ಇಷ್ಟೇ ದಿನ ರಜೆ ಕೊಡಿ ಅಂತ ಒತ್ತಾಯ ಮಾಡ್ಬೇಡಿ: ಕ್ಯಾಮ್ಸ್ ಆಗ್ರಹ
Advertisement
ಮಾರುಕಟ್ಟೆ ಮೌಲ್ಯ 5 ಸಾವಿರ ಕೋಟಿ ರೂ. ಇರುವ ಕಂಪನಿಗಳು ಸ್ಮಾಲ್‌ಕ್ಯಾಪ್ ಎಂದು ಗುರುತಿಸಿಕೊಂಡರೆ, 5 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್ ಕ್ಯಾಪ್ ವ್ಯಾಪ್ತಿಯಲ್ಲಿ ಬರುತ್ತವೆ.
Advertisement
ರಕ್ತಪಾತಕ್ಕೆ ಕಾರಣ ಏನು?
ಇಸ್ರೇಲ್ ಮತ್ತು ಇರಾನ್ ನಡುವಿನ ತಿಕ್ಕಾಟ ವಿಶ್ವಾದ್ಯಂತ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬಿದ್ದಿದೆ. ಭಾರೀ ಪ್ರಮಾಣದಲ್ಲಿ ದೇಶ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣವನ್ನು ಹಿಂದಕ್ಕೆ ಪಡೆದ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿದೆ. ವಿದೇಶಿ ಷೇರು ಮಾರುಕಟ್ಟೆಯಲ್ಲಿ ಬುಧವಾರವೇ ರಕ್ತಪಾತವಾಗಿತ್ತು. ಬುಧವಾರ ಭಾರತದ ಷೇರು ಮಾರುಕಟ್ಟೆಗೆ ಗಾಂಧಿ ಜಯಂತಿಯಂದು ರಜೆ ಇದ್ದ ಕಾರಣ ಇಂದು ರಕ್ತಪಾತವಾಗಿದೆ.