ತೆಹ್ರಾನ್: ಕೆಲ ಮಹಿಳೆಯರು ಹಿಜಬ್ (Hijab) ಧರಿಸದ ಕಾರಣ ಇರಾನ್ನಲ್ಲಿ (Iran) ಕಾಲ ಕಾಲಕ್ಕೆ ಮಳೆ ಆಗುತ್ತಿಲ್ಲವೆಂದು ಇರಾನ್ನ ಧಾರ್ಮಿಕ ಮುಖಂಡ ಮಹ್ಮದ್ ಮೆಹದಿ ಹುಸ್ಸೇನಿ ಹಮೆದಾನಿ ಹೇಳಿಕೆ ನೀಡಿದ್ದಾರೆ.
ಸಮಾಜದಲ್ಲಿ ಹಿಜಬ್ ಆಚರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹಿಜಬ್ ತೆಗೆದು ಮಹಿಳೆಯರಿಗೆ (Woman) ಸೇವೆ ಸಲ್ಲಿಸುವ ಅಂಗಡಿಗಳು ಮತ್ತು ಮಾಲ್ಗಳಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
Advertisement
Advertisement
ಈಗ ಇರಾನ್ ಸುಪ್ರೀಂ ಲೀಡರ್ ಖಮೇನಿಗೆ ಅತ್ಯಂತ ಆಪ್ತ. ಮಹ್ಮದ್ ಮಹೆದಿ ಹೇಳಿಕೆ ಪ್ರಸ್ತಾಪಿಸಿ ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ. ಹಿಜಬ್ಗೂ ಮಳೆಗೂ ಏನ್ ಸಂಬಂಧ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಇರಾನ್ನಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ಇನ್ನಷ್ಟು ತೀವ್ರ ಸ್ವರೂಪ ಪಡೆಯುತ್ತಿವೆ. ಇದನ್ನೂ ಓದಿ: ಭರವಸೆ ಕೊಟ್ಟವರೆಲ್ಲ ಕೈ ಎತ್ತಿದ್ರು – ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಅಳಲು
Advertisement
Advertisement
ಘಟನೆಯೇನು?: ಕಳೆದ ವರ್ಷ ಸೆಪ್ಟೆಂಬರ್ 16 ರಂದು, 22 ವಯಸ್ಸಿನ ಮಹ್ಸಾ ಅಮಿನಿ ಹಿಜಬ್ ಧರಿಸದೇ ಇದ್ದಿದ್ದಕ್ಕೆ ಟೆಹ್ರಾನ್ನಲ್ಲಿ ಬಂಧನಕ್ಕೊಳಗಾಗಿ ನೈತಿಕ ಪೊಲೀಸ್ಗಿರಿಗೆ ಬಲಿಯಾಗಿದ್ದರು. ನಂತರ ಇರಾನ್ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮಹಿಳೆಯರು ಹಿಜಬ್ ಸುಟ್ಟು, ತಲೆಗೂದಲು ಕತ್ತರಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: 2ನೇ ಮದುವೆಯಾದ ದಾವೂದ್ ಇಬ್ರಾಹಿಂ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k