ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮನೆ ಮಾಡಿದೆ. ಇಸ್ರೇಲ್ ಡ್ರೋನ್ ದಾಳಿ (Israel Drone Attack) ಬಗ್ಗೆ ಇದೀಗ ಇರಾನ್ (Iran) ವ್ಯಂಗ್ಯ ಮಾಡಿದೆ.
ಈ ಸಂಬಂಧ ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಡಿ ಅವರು, ಇಸ್ರೇಲ್ ಡ್ರೋನ್‌ಗಳು ಮಕ್ಕಳು ಆಡುವ ಆಟಿಕೆಗಳಂತೆ ಎಂದು ಲೇವಡಿ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ಪ್ರಮುಖ ಸೇನಾ ವಾಯುನೆಲೆ ಮತ್ತು ಇರಾನ್‌ನ ಹಲವಾರು ಪರಮಾಣು ಕೇಂದ್ರಗಳ ನೆಲೆಯಾಗಿರುವ ಇಸ್ಫಹಾನ್‌ನಲ್ಲಿ ಮೂರು ಸ್ಫೋಟಗಳು ವರದಿಯಾಗಿವೆ. ದಾಳಿಯ ಬಳಿಕ ಇರಾನ್ ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಆದರೆ ಈ ಡ್ರೋನ್ ದಾಳಿಯ ಬಗ್ಗೆ ಇರಾನ್ ತನಿಖೆ ನಡೆಸುತ್ತಿದೆ. ಆದಾಗ್ಯೂ, ಇದುವರೆಗೆ ದಾಳಿಗೆ ಇಸ್ರೇಲಿ ಲಿಂಕ್ ಇರುವ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ.
ಇದೇ ವೇಳೆ, ನಮ್ಮ ದೇಶದ ಪ್ರಯೋಜನಗಳಿಗೆ ಅಡ್ಡಿ ಉಂಟು ಮಾಡಲು ನೋಡಿದ್ರೆ, ಅದರ ಪರಿಣಾಮಗಳು ತೀವ್ರವಾಗಿರುತ್ತದೆ ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಎಲೋನ್ ಮಸ್ಕ್ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ