ಬೆಳಗಾವಿ: ಜಿಲ್ಲೆಯ ವೈದ್ಯರು 6 ತಿಂಗಳ ಪುಟ್ಟ ಮಗುವಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಇರಾನ್ ಮೂಲದ ಜೂಲ್ ಪೇಕಾರ್ ಪುತ್ರಿ ಮಸರ್ ಈ ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದ ಬೇಬಿ. ಬೆಳಗಾವಿಯ ಬಿಎಚ್‍ಆರ್ ಲೇಕ್ಯೂವೆಲ್ ಆಸ್ಪತ್ರೆಯ ವೈದ್ಯರು ನಡೆಸಿದ ಶಸ್ತ್ರ ಚಿಕಿತ್ಸೆ ಯಶಸ್ಸನ್ನು ಕಂಡಿದ್ದು, ಇದೀಗ ಪುಟ್ಟ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.
Advertisement
Advertisement
ಇರಾನ್ ಮೂಲದ ಜೂಲ್ ಪೇಕಾರ್ ಪುತ್ರಿಯ ಆರೋಗ್ಯ ನಿಮಿತ್ತ ಮುಂಬೈಗೆ ಮೊದಲು ಆಗಮಿಸಿದ್ದು, ಅಲ್ಲಿನ ವೈದ್ಯರು ಬಾಲಕಿ ಮಸರ್ ಉಳಿಯುವ ಬಗ್ಗೆ ಯಾವುದೇ ಖಚಿತ ಭರವಸೆ ನೀಡಲಿಲ್ಲ. ನಂತರ ಸ್ನೇಹಿತರ ಸಲಹೆಯ ಮೇರೆಗೆ ಬೆಳಗಾವಿಗೆ ಬಂದಿದ್ದು, ಬೆಳಗಾವಿಯ ಲೆಕ್ಯೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಡಾ. ಪ್ರಭು ಹಳಕಟ್ಟಿ ನೇತೃತ್ವದಲ್ಲಿ ಡಾ. ಅಮೃತ ನೇರ್ಲಿಕರ್ ತಂಡ ಬಾಲಕಿ ಮಸರ್ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದ್ದಾರೆ.
Advertisement
ಹೃದಯ ಶಸ್ತ್ರ ಚಿಕಿತ್ಸೆ ನಂತರ ಇದೀಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ವೈದ್ಯರು ಮತ್ತು ಬಾಲಕಿ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮುಂಬೈಗೆ ಹೊಲಿಸಿದ್ರೆ ಬೆಳಗಾವಿಯಲ್ಲಿ ಚಿಕಿತ್ಸೆಗೆ ಆಗಿರೋ ವೆಚ್ಚವು ಕಡಿಮೆಯಾಗಿದೆ. ಸದ್ಯ ಮಸರ್ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ಕೆಲವೇ ದಿನಗಳಲ್ಲಿ ವಾಪಸ್ ಇರಾನ್ ದೇಶಕ್ಕೆ ಸಂತಸದಿಂದ ತೆರಳಲು ಸಿದ್ಧರಾಗಿದ್ದಾರೆ.
Advertisement