ನ್ಯೂಯಾರ್ಕ್: 22 ವರ್ಷದ ಯುವತಿ ಮಹ್ಸಾ ಅಮಿನಿ (Mahsa Amini) ಸಾವಿನ ನಂತರ ಇರಾನ್‌ನಲ್ಲಿ (Iran) ಹಿಜಬ್ (Hijab) ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು, 6 ವಾರಗಳ ಅವಧಿಯಲ್ಲಿ 14,000 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆ (UN) ತಿಳಿಸಿದೆ.
ಕಳೆದ ಆರು ವಾರಗಳಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14,000 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಮಾನವ ಹಕ್ಕುಗಳ ಹೋರಾಟಗಾರರು, ವಿದ್ಯಾರ್ಥಿಗಳು, ವಕೀಲರು, ಪತ್ರಕರ್ತರು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ
Advertisement
Advertisement
ದೇಶದಲ್ಲಿ ಭದ್ರತಾ ಪಡೆಗಳ ಹಿಂಸಾತ್ಮಕ ಪ್ರವೃತ್ತಿಗೆ ಕನಿಷ್ಠ 277 ಜನರು ಮೃತಪಟ್ಟಿದ್ದಾರೆ. ಸಾವು-ನೋವುಗಳ ಬಗ್ಗೆ ಈವರೆಗೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಮಾಧ್ಯಮಗಳ ವರದಿ ಆಧರಿಸಿ ಅಂಕಿಅಂಶ ನೀಡಲಾಗಿದೆ.
Advertisement
“ಇದು ಸುಧಾರಣೆಗಾಗಿ ಮಾತ್ರ ನಡೆಯುತ್ತಿರುವ ಪ್ರತಿಭಟನೆಯಲ್ಲ. ಇಸ್ಲಾಮಿಕ್ ಗಣರಾಜ್ಯದ ಅಂತ್ಯವನ್ನು ಬೇಡುವ ಧಂಗೆಯಾಗಿದೆ” ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಇತಿಹಾಸದ ಸಹಾಯಕ ಪ್ರಾಧ್ಯಾಪಕ ರೋಹಮ್ ಅಲ್ವಾಂಡಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ
Advertisement
ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಸೆ.16 ರಂದು ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ನಂತರ ಆಕೆ ಸಾವಿಗೀಡಾದಳು. ಇರಾನ್‌ನ ನೈತಿಕ ಪೊಲೀಸ್‌ಗಿರಿಗೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂತು. ಇದರ ಬೆನ್ನಲ್ಲೇ ಯುವತಿ ಸಾವು ಹಾಗೂ ಹಿಜಬ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು.