ಚಾಮರಾಜನಗರ: ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆ ಚಾಮರಾಜನಗರದಲ್ಲಿ (Chamarajanagara) ನಾಲ್ಕು ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಎರಡು ಸಿಎನ್‌ಜಿ ಬಂಕ್, ಎರಡು ಆಟೋ ಎಲ್‌ಪಿಜಿ ಬಂಕ್ ಸ್ಥಗಿತಗೊಂಡಿವೆ. ಗ್ಯಾಸ್ ತುಂಬಿಸಲು ಆಟೋ ಚಾಲಕರ ಪರದಾಡುವಂತಾಗಿದೆ.
ಎಲ್‌ಪಿಜಿ ಗ್ಯಾಸ್ ನಂಬಿಕೊಂಡಿದ್ದ ಆಟೋ ಚಾಲಕರ ಸ್ಥಿತಿ ಅಯೋಮಯವಾಗಿದೆ. ಗ್ಯಾಸ್ ಆಟೋ ಚಾಲಕರು ಇದನ್ನೇ ನಂಬಿಕೊಂಡಿದ್ದು, ದಿಕ್ಕು ತೋಚದಂತಾಗಿದೆ. ನಮ್ಮ ಆಟೋಗೆ ಪೆಟ್ರೋಲ್ ಸಹ ಹಾಕಿಸಲು ಆಗಲ್ಲ. ಗ್ಯಾಸ್ ಎಲ್ಲಿ ಹಾಕಿಸೋದು? ಹೇಗೆ ಅಂತಾ ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧ ಶುರುವಾದ ಬಳಿಕ ಯುಎಇಯಿಂದ ಕಾರವಾರಕ್ಕೆ ಬಂದ ಮೊದಲ ಹಡಗು
ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗ್ಯಾಸ್ ಬಂಕ್ ಖಾಲಿಯಾಗಿದೆ. ನಿತ್ಯ 2000 ಲೀಟರ್ ಗ್ಯಾಸ್ ಸೇಲ್ ಆಗತ್ತಿತ್ತು. ನಿನ್ನೆಯಿಂದ ಸಪ್ಲೈ ಆಗ್ತಿಲ್ಲ ಎಂದು ಗ್ಯಾಸ್ ಬಂಕ್ ಮಾಲೀಕರು ಹೇಳುತ್ತಿದ್ದಾರೆ.

