ಟೆಹ್ರಾನ್: ಕಳೆದ ಮೂರು ತಿಂಗಳಿನಿಂದ ಹಿಜಬ್ ವಿರೋಧಿಸಿ (Anti Hijab Protest) ಇರಾನ್‌ನಲ್ಲಿ (Iran) ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಖ್ಯಾತ ಇರಾನಿ ನಟಿಯನ್ನ ಪೊಲೀಸರು (Police) ಬಂಧಿಸಿದ್ದಾರೆ.
ಸುಳ್ಳು ವಿಷಯಗಳನ್ನು ಬಿತ್ತಿದ್ದಾರೆ ಹಾಗೂ ಅವ್ಯವಸ್ಥೆಯನ್ನು ಪ್ರಚೋದಿಸಿದ್ದಾರೆ ಎನ್ನುವ ಆರೋಪದ ಮೇಲೆ ಇರಾನಿ ನಟಿ ತರನೆಹ್ ಅಲಿದೋಸ್ತಿ (38) (Taraneh Alidoosti) ಅವರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಕೇಸರಿ ಬಿಕಿನಿ ವಿವಾದ: ವಿರೋಧಿಗಳಿಗೆ ಸಮಸ್ಯೆಯಿದೆ ಎಂದ ಸಂಸದೆ ನುಸ್ರತ್ ಟ್ರೋಲ್
ಇದೇ ತಿಂಗಳ ಡಿಸೆಂಬರ್ 8 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. `ನೀವು ಮೌನವಾಗಿದ್ದೀರಿ ಅಂದರೆ, ಎದುರಾಳಿಯ ದಬ್ಬಾಳಿಕೆಯನ್ನು ಬೆಂಬಲಿಸಿದಂತೆ. ಈ ರಕ್ತಪಾತವನ್ನು ನೋಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರೋದು ಮಾನವೀಯತೆಗೆ ಮಾಡಿದ ಅಪಮಾನ’ ಎಂದು ಪೋಸ್ಟ್ ಹಾಕಿದ್ದರು. ಅವರು ಪೋಸ್ಟ್ ಹಾಕಿದ್ದ ದಿನವೇ ಇರಾನ್‌ನಲ್ಲಿ 23 ವರ್ಷದ ಯುವಕನೊಬ್ಬನನ್ನ ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ
ತರನೆಹ್ ಅಲಿದೋಸ್ತಿ ಚಿಕ್ಕ ವಯಸ್ಸಿನಿಂದಲೂ ಇರಾನಿನ ಚಿತ್ರರಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. 2016ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ `ದಿ ಸೇಲ್ಸ್‌ಮ್ಯಾನ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ `ಲೀಲಾ ಬ್ರದರ್ಸ್’ ಚಿತ್ರದಲ್ಲೂ ಅವರು ನಟಿಸಿದ್ದಾರೆ.