ಕೊಪ್ಪಳ: ಸಂಗಾಪೂರ ಸುತ್ತಮುತ್ತ ಭಾಗದ ಜನರು ಕಲ್ಲು ಒಡೆದು ಬದುಕು ಸಾಗಿಸುತ್ತಾರೆ. ಸದ್ಯ ಕಲ್ಲು ಒಡೆಯುವುದನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ಅದನ್ನು ಪುನಃ ಆರಂಭ ಮಾಡಬೇಕಾದರೆ ಶಾಸಕರಿಗೆ ಪ್ರತಿ ತಿಂಗಳು 5 ಲಕ್ಷ ರೂ. ಮಾಮೂಲಿ ರೂಪದಲ್ಲಿ ನೀಡಬೇಕು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರ ವಿರುದ್ಧ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಂಭೀರ ಆರೋಪವನ್ನು ಮಾಡಿದ್ದಾರೆ.
Advertisement
ಕೊಪ್ಪಳದ ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಅನ್ಸಾರಿಯವರ ನಡೆ ಜನಾಶೀರ್ವಾದ ಕಡೆಗೆ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅನ್ಸಾರಿ, ಸುಮಾರು ವರ್ಷಗಳಿಂದ ಕಲ್ಲು ಬಂಡೆಗಳನ್ನು ಒಡೆದು ಜೀವನ ಸಾಗಿಸುತ್ತಿದ್ದ ಗಂಗಾವತಿ ತಾಲೂಕಿನ ಮಲ್ಲಾಪೂರ, ಸಂಗಾಪೂರ, ಬಸವನದುರ್ಗ, ಗೂಗಿಬಂಡಿ ಕ್ಯಾಂಪ್, ರಾಂಪೂರ ಗ್ರಾಮಗಳಲ್ಲಿ ಇರುವ ಬಡ ವರ್ಗದವರಿಗೆ ಕಾನೂನುಗಳ ಮೂಲಕ ಕಲ್ಲು ಒಡೆಯುವ ಕಾಯಕವನ್ನು ನಿಲ್ಲಿಸಲಾಗಿದೆ. ಸದ್ಯ ಇವರು ಕೆಲಸ ಇಲ್ಲದೆ ಗ್ರಾಮದಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ: ಎಸ್‍ಟಿಎಸ್ ಆರೋಪ
Advertisement
Advertisement
ಬಡವರ್ಗದವರ ಕಷ್ಟವನ್ನು ಹೇಳಿಕೊಳ್ಳಲು ಹಾಗೂ ಕಲ್ಲು ಒಡೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪರಣ್ಣ ಮುನವಳ್ಳಿಯವರಿಗೆ ಮನವಿ ಮಾಡಿಕೊಂಡರೆ, ಅವರು ಮನವಿಗೆ ಸ್ಪಂದಿಸದೆ ಅವರಿಂದಲೂ ಕೂಡ ಮಾಮೂಲಿ ಪಡೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಕಲ್ಲು ಒಡೆಯಲು ಅವಕಾಶ ಬೇಕಾದರೆ ಪ್ರತಿ ತಿಂಗಳು 5 ಲಕ್ಷ ರೂ.ಗಳನ್ನು ಮಾಮೂಲಿ ರೂಪದಲ್ಲಿ ನೀಡಬೇಕು. ನೀಡಿದರೆ ನಿಮಗೆ ಕಲ್ಲು ಒಡೆಯಲು ಅವಕಾಶ ಕಲ್ಪಿಸಿಕೊಡಲಾಗುವುದು, ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಬಡ ವರ್ಗದವರಿಂದಲೂ ಕೂಡ ಮಾಮೂಲಿ ಪಡೆದುಕೊಳ್ಳುವ ಕೆಲಸಕ್ಕೆ ಶಾಸಕರು ಮುಂದಾಗುತ್ತಿದ್ದಾರೆ. ಈ ರೀತಿಯಲ್ಲಿ ಕ್ಷೇತ್ರದಲ್ಲಿ ಬರಿ ಮಾಮೂಲಿ ರಾಜಕೀಯ ನಡೆಯುತ್ತಿದೆ. ಬಡವರು, ಕೂಲಿಕಾರರು ಬದುಕು ಸಾಗಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ
Advertisement