ಬಳ್ಳಾರಿ: ಬ್ಯಾನರ್ ಗಲಭೆ (Ballari Banner Clash) ಬಳಿಕ ವರ್ಗಾವಣೆ ಆಗಿದ್ದ ಡಿಐಜಿ (DIG) ಆಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ (Vartika Katiyar) ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಫೈಲ್‌ಗಳನ್ನು ಈಗಿನ ಅಧಿಕಾರಿಗಳಿಗೆ ನೀಡದಂತೆ ಬೆದರಿಕೆ ಹಾಕಿದ್ದಾರೆ.
ವರ್ತಿಕಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಐಪಿಎಸ್ ಹರ್ಷ ಅವರನ್ನ ನೇಮಕ ಮಾಡಿತ್ತು. ವರ್ಗಾವಣೆ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮೊರೆ ಹೋಗಿರುವ ಕಟಿಯಾರ್ ಅವರು ಮತ್ತೇ ಬಳ್ಳಾರಿಗೆ ಬರುವ ತವಕದಲ್ಲಿದ್ದಾರೆ
ಈಗ ಬಳ್ಳಾರಿಯ ವಲಯ ಸಹಾಯಕ ಆಡಳಿತಾಧಿಕಾರಿ ಬಸವರಾಜ್ ಅವರಿಗೆ ವಾಟ್ಸಪ್ ಕರೆ ಮಾಡಿದ್ದ ವರ್ತಿಕಾ ಕಟಿಯಾರ್, ಪ್ರಮುಖ ಕಡತಗಳನ್ನ ಈಗಿನ ಅಧಿಕಾರಿಗೆ ನೀಡದಂತೆ ಸೂಚನೆ ನೀಡಿದ್ದಾರೆ.
ನನ್ನ ವರ್ಗಾವಣೆ ವಿಚಾರ ಸಿಎಟಿಯಲ್ಲಿದೆ. ಕಡತಗಳನ್ನು ನೀಡಿದರೆ ಸಿಎಟಿಯಲ್ಲಿ ಪ್ರತಿವಾದಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ವರ್ತಿಕಾ ಕಟಿಯಾರ್ ಕರೆ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಉತ್ಖನನ ವೇಳೆ 3,000 ವರ್ಷಗಳಷ್ಟು ಹಳೆಯ ಮಾನವನ ಪಳೆಯುಳಿಕೆ ಪತ್ತೆ

