ನವದೆಹಲಿ: ಕೊನೆಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡಿದೆ.
ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ರಿಷಿ ಕುಮಾರ್ ಶುಕ್ಲಾ ಅವರನ್ನು ಸಿಬಿಐ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ.
Advertisement
ರಿಷಿ ಕುಮಾರ್ ಶುಕ್ಲಾ ಅವರು 1983ನೇ ಬ್ಯಾಚ್ನ ಅಧಿಕಾರಿ. ಅಲೋಕ್ ವರ್ಮಾ ಅವರಿಂದ ಖಾಲಿಯಾಗಿದ್ದ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಶುಕ್ಲಾ ಅವರು ನೇಮಕವಾಗಿದ್ದಾರೆ. ಪ್ರಸ್ತುತ ಮಧ್ಯ ಪ್ರದೇಶದ ಪೊಲೀಸ್ ವಸತಿ ನಿಗಮದ ಮುಖ್ಯಸ್ಥರಾಗಿದ್ದಾರೆ. ಇದನ್ನು ಓದಿ : ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?
Advertisement
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇದ್ದರು. ಈ ಸಮೀತಿಯು 70 ಕ್ಕೂ ಅಧಿಕ ಸ್ಪರ್ಧಿಗಳ ಪೈಕಿ ಶುಕ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಈ ಮೂಲಕ ಶುಕ್ಲಾ ಅವರು 2 ವರ್ಷಗಳ ಅವಧಿಗೆ ಸಿಬಿಐನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
Advertisement
The Appointments Committee of the Cabinet has approved the appointment of IPS Rishi Kumar Shukla as the new CBI Director for a period of two years from the date of assumption of charge of the office. https://t.co/o7vVFbkPBb
— ANI (@ANI) February 2, 2019
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv