ಬೆಂಗಳೂರು: ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರು ಫ್ಯಾಷನ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಖ್ಯಾತ ಮಹಿಳಾ ಫ್ಯಾಶನ್ ಡಿಸೈನರ್ ಮೀನು ಸರವಣನ್ ಅವರು ಡಿಸೈನ್ ಮಾಡಿದ್ದ ಕಡು ನೀಲಿ ಬಣ್ಣದ ಗೌನ್ ಧರಿಸಿ ಮಾಡೆಲ್ ರೀತಿಯಾಗಿ ಮಿಂಚಿದ್ದಾರೆ. ರೂಪಾ ಅವರ ಮನೆಯಲ್ಲೇ ಈ ಫೋಟೋ ಶೂಟ್ ನಡೆದಿದ್ದು, ಯಾವ ಮಾಡೆಲ್‍ಗೂ ಕಡಿಮೆ ಇಲ್ಲದಂತೆ ಐಪಿಎಸ್ ಅಧಿಕಾರಿ ಮಿಂಚುತ್ತಿದ್ದಾರೆ. ಈ ವೇಳೆ ರೂಪ ಅವರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ರೂಪ ಅವರು 1998 ರಲ್ಲಿ ಮಿಸ್ ಬೆಂಗಳೂರು ಯುನಿವರ್ಸಿಟಿ ಕಿರೀಟ ಮತ್ತು ಮಿಸ್ ದಾವಣಗೆರೆ ಪ್ರಶಸ್ತಿಯನ್ನು ಗೆದ್ದಿದ್ದರು.
Advertisement
Advertisement
ನಾನು ಪೊಲೀಸ್ ಕೆಲಸ ಬಿಟ್ಟು ಮಾಡೆಲಿಂಗ್ ಗೆ ಹೋಗಿಲ್ಲ. ಈ ಮೂಲಕ ಒಬ್ಬ ಸಬಲೀಕೃತ ಮಹಿಳೆ ಕೂಡ ಫ್ಯಾಷನ್ ಆಗಿ ಇರಬಲ್ಲಳು. ಕೇವಲ ಮಾಡೆಲ್ ಮತ್ತು ಚಿತ್ರ ತಾರೆಯರು ಮಾತ್ರ ಫ್ಯಾಷನ್ ಮಾಡಬಲ್ಲರು, ಸಾಮಾನ್ಯ ಜನರು ಕೂಡ ಫ್ಯಾಷನ್ ಮಾಡಬಲ್ಲರು ಎಂಬ ಸಂದೇಶವನ್ನು ತಿಳಿಸಲು ಈ ರೀತಿ ಮಾಡಿದ್ದೇನೆ. ನನ್ನ ಜೊತೆಗೆ ಮೂರು-ನಾಲ್ಕು ಸಾಮಾನ್ಯ ಮಹಿಳೆಯರು ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ರೂಪ ಅವರು ಹೇಳಿದ್ದಾರೆ.
Advertisement
Advertisement
“ನಾನು ಮೊದಲಿಗೆ ನಾಗರಿಕ ಸೇವೆಗಳಲ್ಲಿ ಸೇರಿಕೊಂಡಾಗ, ನಾನು ಕಾಲೇಜಿನಲ್ಲಿ ನನ್ನ ಸಾಧನೆಗಳ ಬಗ್ಗೆ ಯಾರಿಗೂ ಹೇಳಲಿಲ್ಲ. ಯಾಕೆಂದರೆ ಜನರು ನನ್ನನ್ನು ಅಧಿಕಾರಿ ಎಂದು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಮೀನು ಸರವಣನ್ ಅವರು ನನಗೆ ಸುಮಾರು 10 ತಿಂಗಳುಗಳ ಕಾಲ ಸಲಹೆ ನೀಡುತ್ತಿದ್ದರು. ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಅವರ ಒತ್ತಾಯಪೂರ್ವಕವಾಗಿ ನಾನು ಯೋಚಿಸಿ ಫೋಟೋಶೂಟ್ ಮಾಡಿಸಿಕೊಂಡೆ ಎಂದು ಹೇಳಿದ್ದಾರೆ.
ರೂಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews