ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ರೈಲ್ವೇಯ ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ.
ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಸರ್ಕಾರಕ್ಕೆ ಪತ್ರ ಬರೆದು ಭಾಸ್ಕರ್ ರಾವ್ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: 500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ
Advertisement
Advertisement
ಕಳೆದ ಹದಿನೈದು ದಿನದಿಂದ ಅಲೋಕ್ ಕುಮಾರ್ ವಿರುದ್ಧ ಹೋರಾಟ ಮಾಡಿದ್ದ ಭಾಸ್ಕರ್ ರಾವ್ ಮುಂದಿನ ನಡೆ ನಿಗೂಢವಾಗಿದೆ. ಇದನ್ನೂ ಓದಿ: ಆಪ್ತ ಸ್ನೇಹಿತನ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಸಿಎಂ
Advertisement
ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಒಂದು ವರ್ಷದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 2020ರ ಜುಲೈನಲ್ಲಿ ಅವರನ್ನು ಸರ್ಕಾರ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಹುದ್ದೆಗೆ ವಗಾವಣೆ ಮಾಡಿತ್ತು. ಇದನ್ನೂ ಓದಿ: ಡ್ರಗ್ ಕೇಸಿನಲ್ಲಿ ಚಿಕ್ಕದೊಂದು ಐಸ್ ಬರ್ಗ್ ಹೊರಬಂದಿದೆಯಷ್ಟೇ: ಭಾಸ್ಕರ್ ರಾವ್
Advertisement
ಭಾಸ್ಕರ್ ರಾವ್ ಅವರ ಸೇವಾ ಅವಧಿ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷ ಬಾಕಿಯಿದೆ. ಹೀಗಿದ್ದರೂ ಈಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.