ದಿಸ್ಪುರ್: ಹಣ ಕೊಡದಿದ್ದರೆ ಜಿಹಾದಿಗಳೊಂದಿಗೆ ಸಂಬಂಧವಿದೆ ಎಂದು ಬಿಂಬಿಸಿ ಎನ್‍ಕೌಂಟರ್ ಮಾಡುವುದಾಗಿ ಉದ್ಯಮಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಅಸ್ಸಾಂನಲ್ಲಿ (Assam) 9 ಜನ ಪೊಲೀಸರನ್ನು (Police) ಬಂಧಿಸಲಾಗಿದೆ.
ಪೊಲೀಸರು ನನ್ನನ್ನು ಅಕ್ರಮವಾಗಿ ಬಂಧಿಸಿ 2.5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಎನ್‍ಕೌಂಟರ್‌ನಲ್ಲಿ ಕೊಲ್ಲುತ್ತೇವೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಉದ್ಯಮಿ ರಬಿಯುಲ್ ಇಸ್ಲಾಂ ಎಂಬುವವರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೈದಿಗಳಿಗೆ ಸೇಬು, ಮೂಸಂಬಿ ಹಣ್ಣಿನಲ್ಲಿ ಗಾಂಜಾ ಸಪ್ಲೈ – ಮೂವರು ಅರೆಸ್ಟ್
Advertisement
ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಬಂದು ಏಕಾಏಕಿ ಡ್ರಗ್ಸ್ ಹಾಗೂ ಹಣದ ಬಗ್ಗೆ ಮಾತು ಶುರು ಮಾಡಿದರು. ನಂತರ ಪೊಲೀಸರು ನನ್ನ ಜೊತೆ ಇಬ್ಬರು ಸಂಬಂಧಿಕರನ್ನು ಭವಾನಿಪುರ ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಗಂಟೆಗಳ ಕಾಲ ಹೊಡೆದಿದ್ದಾರೆ. ಬಳಿಕ ಠಾಣೆಯಲ್ಲಿ ಹಲವಾರು ಗಂಟೆಗಳ ಕಾಲ ಬಂಧಿಸಲಾಯಿತು. ಮರುದಿನ ಎಸ್‍ಪಿ ಅವರ ನಿವಾಸಕ್ಕೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದರು ಎಂದು ಉದ್ಯಮಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಬಳಿಕ ಡಿಟರ್ಜೆಂಟ್ ಕಾರ್ಖಾನೆ ಒಂದಕ್ಕೆ ಕರೆದೊಯ್ದು ಅಕ್ರಮ ಹಣ ಸಂಪಾದನೆ ಹಾಗೂ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹೊರಿಸಿ ಎನ್‍ಕೌಂಟರ್ ಮಾಡುವ ಬೆದರಿಕೆ ಒಡ್ಡಲಾಗಿದೆ ಎಂದು ಉದ್ಯಮಿ ಆರೋಪಿಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸಿಐಡಿ 2014ರ ಬ್ಯಾಚ್ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಬುರಗೋಹನ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಸಿದ್ಧಾರ್ಥ ಅವರು ಎರಡು ದಿನಗಳ ಹಿಂದೆ ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆಯಾಗುವವರೆಗೂ ಬಜಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಪುಷ್ಕಲ್ ಗೊಗೊಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಾಯತ್ರಿ ಸೋನೊವಾಲ್ ಮತ್ತು ಅವರ ಪತಿ ಸುಭಾಸ್ ಚಂದರ್, ಸಬ್ ಇನ್ಸ್‌ಪೆಕ್ಟರ್ ದೇಬಜಿತ್ ಗಿರಿ, ಕಾನ್‍ಸ್ಟೆಬಲ್ ಇಂಜಮಾಮುಲ್ ಹಸನ್, ಕಿಶೋರ್ ಬರುವಾ, ನಬೀರ್ ಅಹ್ಮದ್ ಮತ್ತು ದಿಪ್‍ಜಾಯ್ ಕಲಿತಾ ಬಂಧಿತ ಅಧಿಕಾರಿಗಳಾಗಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ
Web Stories