ಮುಂಬೈ: ಭಾರತದಲ್ಲಿ ನಡೆಯುವ ಕ್ರಿಕೆಟ್ ಹಬ್ಬ ಐಪಿಎಲ್ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ ಕ್ರಿಕೆಟ್ ಲೀಗ್‍ನಲ್ಲಿನ ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ಮೂಲಕ ಐಪಿಎಲ್ ಮತ್ತೊಮ್ಮೆ ದುಬಾರಿ ಕ್ರಿಕೆಟ್ ಲೀಗ್ ಆಗಿ ಗುರುತಿಸಿಕೊಂಡಿದೆ.
ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್ ಲೀಗ್‍ನಲ್ಲಿ ವಿಶ್ವದ ಹಲವು ಸ್ಟಾರ್ ಆಟಗಾರರು ಭಾಗವಹಿಸುತ್ತಾರೆ. ಈ ಮೂಲಕ ಈ ಕ್ರಿಕೆಟ್ ಲೀಗ್ ರಂಗೇರುತ್ತದೆ. ಅದೇ ರೀತಿ ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಇದನ್ನೂ ಓದಿ: ಕ್ರಿಕೆಟ್ ಲೋಕದಲ್ಲಿ ಭಾರತೀಯರ ಪಾರುಪತ್ಯ
ಕೆಲದಿನಗಳ ಹಿಂದೆ ಪಿಎಸ್‍ಎಲ್ ಫೈನಲ್ ಪಂದ್ಯ ನಡೆಯಿತು. ಫೈನಲ್‍ನಲ್ಲಿ ಲಾಹೋರ್ ಖಲಂದರ್ಸ್ ತಂಡ ಗೆದ್ದು ಚಾಂಪಿಯನ್ ಆಗಿತ್ತು. ಚಾಂಪಿಯನ್ ಟ್ರೋಫಿ ಜೊತೆ 80 ಮಿಲಿಯನ್ (3.40 ಕೋಟಿ ರೂ.) ನಗದು ಬಹುಮಾನವನ್ನು ಪಡೆದುಕೊಂಡಿತ್ತು. ಆದರೆ ಐಪಿಎಲ್‍ಗೆ ಹೋಲಿಕೆ ಮಾಡಿದರೆ ಈ ಮೊತ್ತ ಭಾರಿ ಕಡಿಮೆ. 2021ರ ಐಪಿಎಲ್ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್, ಟ್ರೋಫಿ ಜೊತೆ 20 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿತ್ತು. ಇದನ್ನು ಗಮನಿಸಿದರೆ ಐಪಿಎಲ್ ನಗದು ಬಹುಮಾನ ಪಾಕಿಸ್ತಾನ ಲೀಗ್‍ಗಿಂತ 5 ಪಟ್ಟು ಹೆಚ್ಚಿರುವುದು ಸ್ಪಷ್ಟವಾಗಿದೆ. ಈ ಮೂಲಕ ಪಿಎಸ್‍ಎಲ್‍ಗಿಂತ ಐಪಿಎಲ್ ದುಬಾರಿ ಎನಿಸಿಕೊಂಡಿದೆ. ಇದನ್ನೂ ಓದಿ: ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ
ಈ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ಸ್ ಸೇರಿದಂತೆ ಇತರ ಕೆಲ ಆಟಗಾರರು ಪಾಕ್‍ನಲ್ಲಿ ನಡೆಯುವ ಪಿಎಸ್‍ಎಲ್, ಐಪಿಎಲ್‍ಗಿಂತ ಶ್ರೇಷ್ಠ ಎಂದು ಕಾಮೆಂಟ್ ಮಾಡಿದ್ದರು. ಆದರೆ 2022ರ ಪಿಎಸ್‍ಎಲ್‍ನಲ್ಲಿ ಫ್ರಾಂಚೈಸ್ ಮೊದಲು ಒಪ್ಪಂದ ಮಾಡಿಕೊಂಡಷ್ಟು ಹಣ ನೀಡುತ್ತಿಲ್ಲ ಎಂದು ಆಸ್ಟ್ರೇಲಿಯಾದ ಆಲ್‍ರೌಂಡರ್ ಜೇಮ್ಸ್ ಫಾಲ್ಕ್‌ನರ್ ಪಿಎಸ್‍ಎಲ್‍ನಿಂದ ಹೊರಬಂದು ಆಕ್ರೋಶ ವ್ಯಕ್ತಪಡಿಸಿದ್ದರು.