ಎಬಿಡಿ, ಕ್ಯಾಚ್ ಆಫ್ ದಿ ಟೂರ್ನಿಮೆಂಟ್ – `ಸೂಪರ್ ಮ್ಯಾನ್’ ಎಂದ್ರು ವಿರಾಟ್

Public TV
2 Min Read
kohli abd 1 1

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್, ಆರ್ ಸಿಬಿ ನಡುವಿನ ಪಂದ್ಯದಲ್ಲಿ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹಾರಿ ಕ್ಯಾಚ್ ಹಿಡಿದಿದ್ದನ್ನು ನೋಡಿ ಕೊಹ್ಲಿ ಎಬಿಡಿಯನ್ನು ಸೂಪರ್ ಮ್ಯಾನ್‍ಗೆ ಹೋಲಿಕೆ ಮಾಡಿದ್ದಾರೆ.

ಈ ಕುರಿತು ಪಂದ್ಯದ ಮುಕ್ತಾಯ ಬಳಿಕ ಎಬಿ ಡಿವಿಲಿಯರ್ಸ್ ಫೋಟೋ ಟ್ವೀಟ್ ಮಾಡಿರುವ ಕೊಹ್ಲಿ ಸೂಪರ್ ಮ್ಯಾನ್ ಲೈವ್ ಟು ಡೇ ಎಂದು ಬರೆದುಕೊಂಡಿದ್ದಾರೆ.

ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ಎಬಿಡಿ ಅರ್ಧ ಶತಕ (69 ರನ್, 39 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದ್ದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 218 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು, ಆದರೆ ಫೀಲ್ಡಿಂಗ್ ನಲ್ಲಿ ಹಲವು ಬಾರಿ ಎಡವಿತ್ತು. ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈ ಚೆಲ್ಲಿದರೆ, ಹಲವು ಆಟಗಾರರು ಕಳಪೆ ಫೀಲ್ಡಿಂಗ್ ನಡೆಸಿದರು. ಇದರ ನಡುವೆಯೂ ಎಬಿಡಿ ಪಡೆದ ಕ್ಯಾಚ್ ಕ್ರಿಕೆಟ್ ಆರ್ ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಆರ್ ಸಿಬಿ ಬೃಹತ್ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ತಂಡದ ವಿಲಿಯಮ್ಸ್(42 ಎಸೆತ, 81 ರನ್) ಮತ್ತು ಅಲೆಕ್ಸ್ ಹೇಲ್ಸ್(35) ಉತ್ತಮ ಆರಂಭ ನೀಡಿದರು. ಪಂದ್ಯದ 8 ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ಮೊಯೆನ್ ಅಲಿ ಎಸೆತದಲ್ಲಿ ಹೇಲ್ಸ್ ಭಾರೀ ಹೊಡೆತಕ್ಕೆ ಮುಂದಾದರು. ಈ ವೇಳೆ ಬೌಂಡರಿ ಬಳಿಯಿದ್ದ ಡಿವಿಲಿಯರ್ಸ್ ಗಾಳಿಯಲ್ಲಿ ಹಾರಿ ಒಂದೇ ಕೈಲಿ ಕ್ಯಾಚ್ ಪಡೆದರು. ಪಂದ್ಯದ ಬಳಿಕ ಮಾತನಾಡಿದ ಎಬಿಡಿ ಆ ವೇಳೆ ಚೆಂಡು ತನ್ನ ಬಳಿಯಿಂದ ದೂರ ಬರುವುದನ್ನು ಕಂಡು ಕ್ಯಾಚ್ ಪಡೆಯಲು ಯತ್ನಿಸಿದೆ. ಅದೃಷ್ಟವಶಾತ್ ಚೆಂಡು ನನ್ನ ಕೈ ಸೇರಿತ್ತು. ಪ್ರತಿ ಬಾರಿ ನಾನು ನನ್ನನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲು ಆರ್ ಸಿಬಿ ಗೆ ಹೈದರಾಬಾದ್ ವಿರುದ್ಧ ಗೆಲುವು ಪಡೆಯುವುದು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ 14 ರನ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಶನಿವಾರ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್ ಸಿಬಿ ಎದುರಿಸಲಿದ್ದು, ಗೆಲ್ಲುವ ಒತ್ತಡದಲ್ಲಿದೆ.

abd

Share This Article
Leave a Comment

Leave a Reply

Your email address will not be published. Required fields are marked *