ಕೊಚ್ಚಿ: ಭಾರತೀಯ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನವನ್ನು ಪಡೆಯಬೇಕೆಂಬ ಆಸೆ ಹೊಂದಿದ್ದ ಕ್ರಿಕೆಟಿಗ ಎಸ್ ಶ್ರೀಶಾಂತ್‍ಗೆ ಭಾರೀ ಹಿನ್ನಡೆಯಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಶಾಂತ್ ಮೇಲೆ ವಿಧಿಸಿದ್ದ ಅಜೀವ ನಿಷೇಧವನ್ನು ತೆರವುಗೊಳಿಸಲು ಕೇರಳ ಹೈಕೋರ್ಟ್ ತಡೆ ನೀಡಿದೆ.
ಆಗಸ್ಟ್ ತಿಂಗಳಿನಲ್ಲಿ ಕೇರಳ ಹೈಕೋರ್ಟ್ ಬಿಸಿಸಿಐಗೆ ಶ್ರೀಶಾಂತ್ ಮೇಲಿನ ಅಜೀವ ನಿಷೇಧವನ್ನು ತೆರವುಗೊಳಿಸುವಂತೆ ಆದೇಶವನ್ನು ನೀಡಿತ್ತು. ಆದರೆ ಬಿಸಿಸಿಐ, ಈ ಆದೇಶವನ್ನು ಪುನರ್ ಪರಿಶೀಲಿಸುವಂತೆ ಅರ್ಜಿಯನ್ನು ಸಲ್ಲಿಸಿತ್ತು. ಬಿಸಿಸಿಐ ಮನವಿಯನ್ನು ಪರಿಶೀಲಿಸಿದ ಹೈ ಕೋರ್ಟ್‍ನ ವಿಭಾಯ ಪೀಠವು ಬಿಸಿಸಿಐ ಪುನರ್ ಪರಿಶೀಲನಾ ಅರ್ಜಿಯನ್ನು ಎತ್ತಿ ಹಿಡಿದಿದ್ದು, ಶ್ರೀಶಾಂತ್ ಮೇಲಿನ ಅಜೀವ ನಿಷೇಧ ತೆರವಿಗೆ ತಡೆ ನೀಡಿದೆ.
Advertisement
ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಶ್ರೀಶಾಂತ್ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದು ಅತ್ಯಂತ ಕೆಟ್ಟ ತೀರ್ಮಾನವಾಗಿದ್ದು, ನನಗೆ ಮಾತ್ರ ವಿಶೇಷ ಕಾನೂನು ಏಕೆ? ನಿಜವಾದ ಅಪರಾಧಿಗಳು ಎಲ್ಲಿ? ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ತಂಡಗಳ ವಿರುದ್ಧ ಯಾವ ಕ್ರಮನ್ನು ಕೈಗೊಳ್ಳಲಾಗಿದೆ ಎಂದು ಬಿಸಿಸಿಐಗೆ ಪ್ರಶ್ನಿಸಿದ್ದಾರೆ. ನನಗೆ ನನ್ನ ಕುಟುಂಬ ಹಾಗೂ ನನ್ನನ್ನು ನಂಬುವ ಹಲವು ಆತ್ಮೀಯರ ಬೆಂಬಲವಿದ್ದು, ನಿಷೇಧ ತೆರವಿನ ವಿಚಾರದಲ್ಲಿ ನಿರಂತರವಾಗಿ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
Advertisement
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಜೊತೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಾಂಡೀಲ, ಅಂಕಿತ್ ಚೌಹಾಣ್, ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ನಿಷೇಧವನ್ನು ವಿಧಿಸಲಾಗಿತ್ತು.
Advertisement
Advertisement
And what about the accused 13 names in Lodha report?? No one wants to know about it?i will keep fighting for my right..God is great ????????✌????????
— Sreesanth (@sreesanth36) October 17, 2017
This is the worst decision ever..special rule for me?what about real culprits?What about chennai super kings ? And what about Rajasthan ?
— Sreesanth (@sreesanth36) October 17, 2017
Anyway all I have is my family and lots of dear ones who still believes in me..I will keep fighting and make sure I don't give up..
— Sreesanth (@sreesanth36) October 17, 2017
Thanks a lot for all the support Nd encouragement given so far. I assure u all that I'm not giving up..I will Keep at it..Nd alwys believe
— Sreesanth (@sreesanth36) October 17, 2017