ಮುಂಬೈ: 2022ರ ಐಪಿಎಲ್‍ಗೆ ಈಗಿನಿಂದಲೇ ಸಿದ್ಧತೆಗಳು ಆರಂಭಗೊಂಡಿದೆ. ಈ ಬಾರಿ ಮೆಗಾ ಹರಾಜು ನಡೆಯುವ ಕಾರಣ ಇದೀಗ ವಿಶ್ವದ ಎಲ್ಲಾ ಆಟಗಾರರ ಆಟದ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಈ ಇಬ್ಬರ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ.
Advertisement
ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿ ಉತ್ತಮವಾದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲಾ 10 ತಂಡಗಳು ಕೂಡ ಪ್ಲಾನ್ ಮಾಡಿಕೊಂಡಿವೆ. ಹಾಗಾಗಿ ದೇಶಿ ಟೂರ್ನಿಯಿಂದ ಹಿಡಿದು, ವಿದೇಶಿ ಟೂರ್ನಿಗಳವರೆಗೆ ಐಪಿಎಲ್ ಫ್ರಾಂಚೈಸಿಗಳು ಒಂದು ಕಣ್ಣಿಟ್ಟಿದ್ದು, ಇಲ್ಲಿ ಮಿಂಚುವ ಆಟಗಾರರಿಗೆ ಹಣ ಸುರಿಯುವ ಯೋಚನೆಯಲ್ಲಿದ್ದಾರೆ. ಇದನ್ನೂ ಓದಿ: ಅಂತ್ಯವಾಯಿತು ಟೀಂ ಇಂಡಿಯಾದಲ್ಲಿ ಕೊಹ್ಲಿ, ಶಾಸ್ತ್ರಿ ಯುಗ
Advertisement
Advertisement
ಟಿ20 ವಿಶ್ವಕಪ್‍ನ್ನು ಗಮನಿಸಿರುವ ಎಲ್ಲಾ ಫ್ರಾಂಚೈಸ್‍ಗಳು ಕೂಡ ಆಟಗಾರರ ಆಟದ ಬಗ್ಗೆ ಸೂಕ್ಷವಾಗಿ ಗಮನಿಸಿದೆ. ಅದರಲ್ಲೂ ಈ ಬಾರಿ ಹೆಚ್ಚು ಗಮನಸೆಳೆದಿರುವುದು ಇಬ್ಬರು ಆಟಗಾರರು. ದಕ್ಷಿಣ ಆಫ್ರಿಕಾ ತಂಡದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಮತ್ತು ಇಂಗ್ಲೆಂಡ್ ಲಿಯಾಮ್ ಲಿವಿಂಗ್ಸ್ಟೋನ್ ಈ ಇಬ್ಬರೂ ಕೂಡ ತಮ್ಮ ತಂಡಕ್ಕಾಗಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನ ನೂತನ ತಂಡ ಅಹಮದಾಬಾದ್‍ನ ಕೋಚ್ ಆಗಲಿದ್ದಾರೆ ರವಿಶಾಸ್ತ್ರಿ?
Advertisement
ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಟಿ20 ವಿಶ್ವಕಪ್‍ನಲ್ಲಿ 5 ಪಂದ್ಯದಲ್ಲಿ 177 ರನ್ ಸಿಡಿಸಿದ್ದಾರೆ. ತಂಡಕ್ಕೆ ಬೇಕಾಗಿದ್ದ ವೇಳೆ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಇವರಿಗಿದೆ. ಇವರಂತೆ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ನೆರವಾದ ಲಿಯಾಮ್ ಲಿವಿಂಗ್ಸ್ಟೋನ್ ಈ ಬಾರಿಯ 112 ಮೀ. ಸಿಕ್ಸ್ ಸಿಡಿಸಿ ಟಿ20 ವಿಶ್ವಕಪ್‍ನಲ್ಲಿ ಅತೀ ದೂರದ ಸಿಕ್ಸ್ ಹೊಡೆದ ಆಟಗಾರನಾಗಿ ಮಿಂಚಿದ್ದಾರೆ. ಈ ಇಬ್ಬರ ಆಟವನ್ನು ಗಮನಿಸಿರುವ ಐಪಿಎಲ್ ಫ್ರಾಂಚೈಸಿಗಳು ಇವರ ಖರೀದಿಗಾಗಿ ಮುಗಿಬೀಳುವುದರಲ್ಲಿ ನೋ ಡೌಟ್.