ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಧೂರಿ ಉದ್ಘಾಟನಾ ಸಮಾರಂಭ ಮಾಡುವುದು ವೇಸ್ಟ್ ಆಫ್ ಮನಿ ಎಂದು ಬಿಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿದೆ.
ಐಪಿಎಲ್ ಎಂದರೆ ಒಂದು ವರ್ಣ ರಂಜಿತ ಕ್ರಿಕೆಟ್ ಹಬ್ಬ. ವಿಶ್ವ ಕ್ರಿಕೆಟಿನಲ್ಲಿ ದುಡ್ಡಿನ ಹೊಳೆಯನ್ನೇ ಹರಿಸುವ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಉದ್ಘಾಟನಾ ಸಮಾರಂಭ ವರ್ಷ ವರ್ಷ ಬಹಳ ಅದ್ಧೂರಿಯಾಗಿ ಆಯೋಜನೆ ಆಗುತಿತ್ತು. ಆದರೆ ಈ ವರ್ಷದಿಂದ ಅದಕ್ಕೆ ಬ್ರೇಕ್ ಹಾಕಲು ಬಿಸಿಸಿಐ ತೀರ್ಮಾನ ಮಾಡಿದೆ.
Advertisement
Advertisement
ಕಳೆದ ವರ್ಷ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲಾಗಿತ್ತು. ಸಮಾರಂಭ ಆಯೋಜಿಸಲು ನಿಗದಿಯಾಗಿದ್ದ ಹಣವನ್ನು ಬಿಸಿಸಿಐ ಸೇನೆಗೆ ನೀಡಿತ್ತು. ಪ್ರತಿ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲು ಅಂದಾಜು 20 ಕೋಟಿ ರೂ ಖರ್ಚಾಗುತ್ತಿತ್ತು. ಅದರಲ್ಲಿ 2019ರ ಪುಲ್ವಾಮಾ ದಾಳಿಯಲ್ಲಿ ಹುತತ್ಮಾರಾದ ಸೈನಿಕರಿಗೆ 11 ಕೋಟಿ ರೂ. ಸಿಆರ್‌ಪಿಎಫ್‌ಗೆ 7 ಕೋಟಿ ರೂ, ನೌಕಾಪಡೆ ಮತ್ತು ವಾಯುಪಡೆಗೆ ತಲಾ 1 ಕೋಟಿ ರೂ. ನೀಡಿತ್ತು.
Advertisement
ಈ ವಿಚಾರವಾಗಿ ಮಾತನಾಡಿರುವ ಬಿಸಿಸಿಐನ ಆಡಳಿತ ಅಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ಪ್ರತಿ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಮಾಡುವುದರಿಂದ ಸುಮ್ಮನೆ ದುಡ್ಡು ವ್ಯರ್ಥವಾಗುತ್ತಿದೆ. ಯಾವ ಕ್ರೀಡಾಭಿಮಾನಿಯು ಸಹ ಈ ಕಾರ್ಯಕ್ರಮವನ್ನು ಇಷ್ಟಪಡುತ್ತಿಲ್ಲ. ಇದಕ್ಕೆ ಸುಮ್ಮನೇ ಅಪಾರ ಪ್ರಮಾಣದ ಹಣವನ್ನು ಖರ್ಚುಮಾಡುವ ಬದಲಿಗೆ ಈ ಹಣವನ್ನು ಸಮಾಜಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ಉಪಯೋಗಿಸಬಹುದು. ಆದ್ದರಿಂದ ಈ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಬಾರದು ಎಂದು ನಾವು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
Advertisement
ಪ್ರತಿ ವರ್ಷ ಐಪಿಎಲ್ ಆರಂಭವಾಗುವ ದಿನ ವರ್ಣರಂಜಿತ ಅದ್ಧೂರಿ ಉದ್ಘಾಟನಾ ಸಮಾರಂಭ ಮಾಡಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ಸ್ ಭಾಗವಹಿಸುತ್ತಿದ್ದರು. ಇವರ ಜೊತೆಗೆ ಅಂತಾರಾಷ್ಟ್ರೀಯ ತಾರೆಗಳು ಪ್ರದರ್ಶನ ನೀಡುತ್ತಿದ್ದರು.