ಬೆಂಗಳೂರು: 5 ವರ್ಷದಿಂದ 15 ವರ್ಷದೊಳಗಿನ ಬಾಲಕರಿಗಾಗಿ ಐಪಿಎಲ್ ಮಾದರಿಯ (IPL Cricket) ಕ್ರಿಕೆಟ್ ಪಂದ್ಯಾವಳಿ ಇಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಬಸವೇಶ್ವರನಗರದ ಕಪಿಲ್ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ (Basaveshwara kapil Sports and Cultural Association) ಆಶ್ರಯದಲ್ಲಿ ಬೆಂಗಳೂರಿನ ಹೊರವಲಯದ ಬಿಐಸಿಸಿ ಕ್ರೀಡಾಂಗಣದಲ್ಲಿ ಜನವರಿ 26 ರಿಂದ 28ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾವಳಿ ಪ್ರತಿಭಾವಂತ ಕ್ರಿಕೆಟ್ ಪಟುಗಳಿಗೆ ವೇದಿಕೆಯಾಗಲಿದೆ.
ಪಿಪಿಎಸ್ ಕಪಿಲ್ ಪ್ರಿಮಿಯರ್ ಲೀಗ್ ಹೆಸರಿನಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಲವು ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದಾರೆ. ಎರಡನೇ ವರ್ಷದ ಪ್ರಿಮಿಯರ್ ಲೀಗ್ ಪಂದ್ಯಾವಳಿ ಇದಾಗಿದ್ದು,ಮಾಗಡಿ ರಸ್ತೆಯ ಬಿಐಸಿಸಿ ಕ್ರೀಡಾಂಗಣ ಎಲ್ಲ ರೀತಿಯಲ್ಲಿ ಸಜ್ಜಾಗಿದೆ ಎಂದು ಕಪಿಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.
ವಿವಿಧ ತಂಡಗಳ ನೂರಕ್ಕೂ ಹೆಚ್ಚು ಉದಯೋನ್ಮುಖ ಬಾಲಕ ಕ್ರಿಕೆಟ್ ಪಟುಗಳು, ಈ ಪ್ರಿಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಂತಿಮ ದಿನ ಪೋಷಕರ ಕ್ರಿಕೆಟ್ ಪ್ರದರ್ಶನ ಪಂದ್ಯ ಕೂಡ ಇರಲಿದೆ ಎಂದು ಮೂರ್ತಿ ತಿಳಿಸಿದ್ದಾರೆ.