ಮುಂಬೈ: ಬಹುನಿರೀಕ್ಷಿತ 2024ರ ಐಪಿಎಲ್ ಹರಾಜು (IPL 2024 Auction) ಪ್ರಕ್ರಿಯೆ ಮಂಗಳವಾರ (ಡಿ.19) ದುಬೈನಲ್ಲಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ.
10 ಫ್ರಾಂಚೈಸಿಗಳು ತಂಡವನ್ನು ಇನ್ನಷ್ಟು ಬಲಪಡಿಸಲು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ಅದರಲ್ಲೂ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಸೀಸ್ ಆಟಗಾರರ ಮೇಲೆ ಕಣ್ಣು ನೆಟ್ಟಿದೆ. ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಟ್ರಾವಿಸ್ ಹೆಡ್ (Travis Head), ಮಾರಕ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ (Mitchell Starc) ಹಾಗೂ ಪ್ಯಾಟ್ ಕಮ್ಮಿನ್ಸ್ ಅವರ ಮೇಲೆ ಫ್ರಾಂಚೈಸಿಗಳು ಗಮನಹರಿಸಿವೆ.
ವಿಶ್ವಕಪ್‌ನಲ್ಲಿ ಮಿಂಚಿದ ಕಿವೀಸ್ ಆಟಗಾರರ ಮೇಲೂ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಮಿಚೆಲ್ ಸ್ಟಾರ್ಕ್ ಅವರನ್ನು ಆರ್‌ಸಿಬಿ ಹಾಗೂ ರಚಿನ್ ರವೀಂದ್ರ (Rachin Ravindra) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೆಳೆಯುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: IPL 2024 Retention: 10 ತಂಡಗಳಲ್ಲಿ 173 ಜನ ಸೇಫ್ – 50 ಆಟಗಾರರಿಗೆ ಗೇಟ್‌ಪಾಸ್ – ಇಲ್ಲಿದೆ ಡಿಟೇಲ್ಸ್
ಸೋಮವಾರ (ಇಂದು) ಜಿಯೋಸಿನಿಮಾ ನಡೆದ ಅಣುಕು ಹರಾಜಿನಲ್ಲಿ ಆಸೀಸ್‌ನ ಮಿಚೆಲ್ ಸ್ಟಾರ್ಕ್ ದಾಖಲೆಯ 18.50 ಕೋಟಿ ರೂ.ಗಳಿಗೆ ಆರ್‌ಸಿಬಿ ಪಾಲಾಗಿದ್ದಾರೆ. ಇನ್ನುಳಿದಂತೆ ಜೆರಾಲ್ಡ್ ಕೋಟ್ಜಿ 18 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಪರ, ಪ್ಯಾಟ್ ಕಮ್ಮಿನ್ಸ್ 17.50 ಕೋಟಿ ರೂ.ಗೆ ಹೈದರಾಬಾದ್ ಪರ, ಶಾರ್ದೂಲ್ ಠಾಕೂರ್ 14 ಕೋಟಿ ರೂ.ಗೆ ಕಿಂಗ್ಸ್ ಪಂಜಾಬ್ ಪರ ಹಾಗೂ ದಿಲ್ಶಾನ್ ಮದುಸಂಕ 10.50 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಕರಿಯಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ 18.50 ಕೋಟಿ ರೂ.ಗೆ ಹರಾಜಾಗಿರುವುದು ದಾಖಲೆಯಾಗಿದೆ. ಈ ಬಾರಿ ಯಾರು ದುಬಾರಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: IPL 2024 Auction: ರಚಿನ್ ರವೀಂದ್ರ, ಮಿಚೆಲ್ ಸ್ಟಾರ್ಕ್ ಸೇರಿ 1,116 ಆಟಗಾರರು ನೋಂದಣಿ
ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿಯಿದೆ?
ಚೆನ್ನೈ ಸೂಪರ್ ಕಿಂಗ್ಸ್
ಖರ್ಚು ಮಾಡಿದ ಒಟ್ಟು ಹಣ – 68.6 ಕೋಟಿ
ಬಾಕಿ ಉಳಿದಿರುವ ಹಣ – 31.40 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 6
ಡೆಲ್ಲಿ ಕ್ಯಾಪಿಟಲ್ಸ್
ಖರ್ಚು ಮಾಡಿದ ಒಟ್ಟು ಹಣ – 71.05 ಕೋಟಿ
ಬಾಕಿ ಉಳಿದಿರುವ ಹಣ – 28.95 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 9
ಗುಜರಾತ್ ಟೈಟಾನ್ಸ್
ಖರ್ಚು ಮಾಡಿದ ಒಟ್ಟು ಹಣ – 61.85 ಕೋಟಿ
ಬಾಕಿ ಉಳಿದಿರುವ ಹಣ – 38.15 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಕೋಲ್ಕತ್ತಾ ನೈಟ್‌ರೈಡರ್ಸ್
ಖರ್ಚು ಮಾಡಿದ ಒಟ್ಟು ಹಣ – 67.3 ಕೋಟಿ
ಬಾಕಿ ಉಳಿದಿರುವ ಹಣ – 32.70 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 12
ಲಕ್ನೋ ಸೂಪರ್ ಜೈಂಟ್ಸ್
ಖರ್ಚು ಮಾಡಿದ ಒಟ್ಟು ಹಣ – 86.85 ಕೋಟಿ
ಬಾಕಿ ಉಳಿದಿರುವ ಹಣ – 13.15 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 6
ಮುಂಬೈ ಇಂಡಿಯನ್ಸ್
ಖರ್ಚು ಮಾಡಿದ ಒಟ್ಟು ಹಣ - 82.25 ಕೋಟಿ
ಬಾಕಿ ಉಳಿದಿರುವ ಹಣ – 17.75 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಪಂಜಾಬ್ ಕಿಂಗ್ಸ್
ಖರ್ಚು ಮಾಡಿದ ಒಟ್ಟು ಹಣ – 70.9 ಕೋಟಿ
ಬಾಕಿ ಉಳಿದಿರುವ ಹಣ – 29.1 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಆರ್‌ಸಿಬಿ
ಖರ್ಚು ಮಾಡಿದ ಒಟ್ಟು ಹಣ – 76.75
ಬಾಕಿ ಉಳಿದಿರುವ ಹಣ – 23.25
ಲಭ್ಯವಿರುವ ಸ್ಲಾಟ್‌ಗಳು – 6
ರಾಜಸ್ಥಾನ್ ರಾಯಲ್ಸ್
ಖರ್ಚು ಮಾಡಿದ ಒಟ್ಟು ಹಣ – 85.5 ಕೋಟಿ
ಬಾಕಿ ಉಳಿದಿರುವ ಹಣ – 14.50 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಸನ್ ರೈಸರ್ಸ್ ಹೈದರಾಬಾದ್
ಖರ್ಚು ಮಾಡಿದ ಒಟ್ಟು ಹಣ – 66 ಕೋಟಿ
ಬಾಕಿ ಉಳಿದಿರುವ ಹಣ – 34 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 6
10 ತಂಡಗಳ ಲೆಕ್ಕಾಚಾರ
ತಂಡಗಳಿಗೆ ನಿಗದಿ ಮಾಡಿದ ಹಣ – 100 ಕೋಟಿ (ತಲಾ)
ಒಟ್ಟು ಖರ್ಚು ಮಾಡಿರುವ ಹಣ – 737.05 ಕೋಟಿ
ಬಾಕಿ ಉಳಿಸಿಕೊಂಡಿರುವ ಹಣ – 262.95 ಕೋಟಿ
ಬಾಕಿ ಉಳಿದಿರುವ ಸ್ಲಾಟ್‌ಗಳು – 77