ಜೆಡ್ಡಾ: 2025ರ ಐಪಿಎಲ್ ಆವೃತ್ತಿಯ ಆಟಗಾರರ ಮೆಗಾ ಹರಾಜು (IPL Mega Auction) ಪ್ರಕ್ರಿಯೆ ಭಾನುವಾರ ಪ್ರಾರಂಭಗೊಳ್ಳಲಿದೆ. ಸೌದಿ ಅರೇಬಿಯಾದ ಜೆಡ್ಡಾ ಮತ್ತು ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಇಂದು (ನ.24) ಮತ್ತು ನಾಳೆ (ನ.25) ಹರಾಜು ಪ್ರಕ್ರಿಯೆ ನಡೆಯಲಿದೆ.
Advertisement
ಒಂದು ಫ್ರಾಂಚೈಸಿ ಕನಿಷ್ಠ 18 ರಿಂದ 25 ಆಟಗಾರರನ್ನು ಒಳಗೊಳ್ಳಬಹುದಾಗಿದ್ದು, ಒಟ್ಟು 577 ಆಟಗಾರರು ಕಣದಲ್ಲಿದ್ದಾರೆ. 10 ಐಪಿಎಲ್ ತಂಡಗಳು ಒಟ್ಟು 641.5 ಕೋಟಿ ರೂ. ಹಣವನ್ನು ಹರಾಜಿನಲ್ಲಿ ವಿನಿಯೋಗಿಸಲಿದೆ. ಸುಮಾರು 204 ಮಂದಿ ಆಟಗಾರರು ಆರಿಸಲ್ಪಡುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ರಿಷಬ್ ಪಂತ್ (Rishabh Pant), ಕೆ.ಎಲ್ ರಾಹುಲ್ (KL Rahul) ಮತ್ತು ಶ್ರೇಯಸ್ ಅಯ್ಯರ್ ಹೆಚ್ಚಿನ ಮೊತ್ತಕ್ಕೆ ಖರೀದಿಸಲ್ಪಡುವ ಆಟಗಾರರ ಪೈಕಿ ಮುಂಚೂಣಿಯಲ್ಲಿ ಇದ್ದಾರೆ. ಇದನ್ನೂ ಓದಿ: IND vs Aus Test| ವಿವಾದಾತ್ಮಕ ತೀರ್ಪಿಗೆ ರಾಹುಲ್ ಔಟ್
Advertisement
Advertisement
ಅದರಲ್ಲಿಯೂ ಮುಖ್ಯವಾಗಿ ರಿಷಬ್ ಪಂತ್ ಅತ್ಯಧಿಕ ಮೊತ್ತವನ್ನು ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆಯನ್ನು ಐಪಿಎಲ್ ಪರಿಣಿತರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಂತ್ ಪ್ರದರ್ಶನವೂ ಈ ಜನಪ್ರಿಯತೆಗೆ ಕಾರಣವಾಗಿದೆ. ಶತಾಯ ಗತಾಯ ಪಂತ್ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಕೆ.ಎಲ್ ರಾಹುಲ್‌ರನ್ನ ಆರ್‌ಸಿಬಿ (RCB) ಖರೀದಿಸುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: ರಾಹುಲ್-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ
Advertisement
ಅದೃಷ್ಟ ಪರೀಕ್ಷೆಗಿಳಿದ ಕನ್ನಡಿಗರು:
ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ಪ್ರಸಿದ್ಧ ಕೃಷ್ಣ, ಲುತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್ ಚೇತನ್, ಮನೋಜ್ ಭಾಂಡಗೆ, ಅಭಿಲಾಶ್ ಶೆಟ್ಟಿ, ವೈಶಾಖ್ ವಿಜಯ್ ಕುಮಾರ್, ಪ್ರವೀಣ್ ದುಬೆ, ಮನ್ವಂತ್ ಕುಮಾರ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮಹೋಹರ್, ಬಿ.ಆರ್ ಶರತ್, ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಹರಾಜು ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ
25 ಕೋಟಿ ರೂ. ಮೈಲಿಗಲ್ಲು
ಎಲ್ಲಕ್ಕಿಂತ ಹೆಚ್ಚಾಗಿ ಕ್ರೀಡಾಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿರುವುದು ಪಂತ್, ಕೆ.ಎಲ್ ರಾಹುಲ್ 25 ಕೋಟಿ ರೂ. ಮೈಲಿಗಲ್ಲನ್ನು ದಾಟುವರೇ ಎಂಬುದು. ಈವರೆಗೆ ಯಾಬೊಬ್ಬ ಭಾರತೀಯ ಆಟಗಾರನೂ ಈ ಸಾಧನೆಗೆ ಪಾತ್ರವಾಗಿಲ್ಲ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪಂತ್ 25 ಕೋಟಿ ರೂ. ಪಡೆದ ಮೊದಲ ಭಾರತೀಯ ಆಟಗಾರ ಖ್ಯಾತಿಗೆ ಯಾರು ಪಾತ್ರರಾಗುತ್ತಾರೆ ಪಾತ್ರರಾಗುವರೇ ಎಂಬುದು ಕುತೂಹಲ ಮೂಡಿಸಿದೆ. ಕಳೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಕರಿಯಾಗಿದ್ದರು, ಇದು ಈವರೆಗಿನ ದಾಖಲೆ ಬೆಲೆಯಾಗಿದೆ.