ದುಬೈ: ಐಪಿಎಲ್ 14ನೇ ಅವೃತ್ತಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಸೆಣಸಾಡಲಿವೆ. ಉಭಯ ತಂಡಗಳು ಕಳೆದ ಎರಡು ಪಂದ್ಯಗಳನ್ನು ಸೋತಿದ್ದು, ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿವೆ.
ಐಪಿಎಲ್ ಇತಿಹಾಸದಲ್ಲಿ ಒಟ್ಟು 28 ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, 17 ಪಂದ್ಯಗಳನ್ನು ಮುಂಬೈ ಹಾಗೂ 11 ಪಂದ್ಯಗಳನ್ನು ಬೆಂಗಳೂರು ತಂಡ ಗೆದ್ದಿದೆ. ಪ್ರತಿಬಾರಿಯೂ ಈ ಕಪ್ ಗೆಲ್ಲುವ ಆಸೆಯೊಂದಿಗೆ ಕಣಕ್ಕಳಿಯುವ ಆರ್ಸಿಬಿ ತಂಡಕ್ಕೆ ಲಕ್ ಕೈಹಿಡಿಯುತ್ತಿಲ್ಲ. ಹಾಲಿ ಚಾಂಪಿಯನ್ ಮುಂಬೈ ತಂಡ ಕೂಡ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇಂದು ಉಭಯ ತಂಡಗಳ ನಡುವೆ ಹೈ ವೋಲ್ಟೆಜ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಸಿಎಸ್‍ಕೆ vs ಆರ್ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ
Advertisement
ಒಟ್ಟು 9 ಪಂದ್ಯವಾಡಿರುವ ಆರ್ಸಿಬಿ 5 ಜಯ ಹಾಗೂ 4 ಪಂದ್ಯಗಳನ್ನು ಸೋತಿದೆ. 9 ಪಂದ್ಯವಾಡಿರುವ ಮುಂಬೈ 4 ಗೆಲುವು ಹಾಗೂ 5 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಆರ್ಸಿಬಿ 3ನೇ ಸ್ಥಾನದಲ್ಲಿದ್ದು, ಮುಂಬೈ 6ನೇ ಸ್ಥಾನದಲ್ಲಿದೆ. ತಂಡಗಳ ಬಲಾಬಲವನ್ನು ನೋಡುವುದಾದರೆ ಮುಂಬೈ ಬಲಿಷ್ಟ ತಂಡವಾಗಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಡಿ ಕಾಕ್, ಹಾಗೂ ಪೊರ್ಲಾಡ್ ಬ್ಯಾಟಿಂಗ್‍ನಲ್ಲಿ ಮಿಂಚಬಲ್ಲರು. ಇದನ್ನೂ ಓದಿ: ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು
Advertisement
ಬೌಲಿಂಗ್‍ನಲ್ಲಿ ವಿಶ್ವದ ಅಗ್ರಗಣ್ಯ ಬೌಲರ್‍ಗಳಾದ ಬುಮ್ರಾ, ಅಡಮ್ ಮಿಲ್ನೆ, ಬೋಲ್ಟ್, ರಾಹುಲ್ ಚಾಹರ್‍ರಂತ ಚಾಂಪಿಯನ್ ಬೌಲರ್ ಗಳು ಮುಂಬೈ ತಂಡದಲ್ಲಿದ್ದಾರೆ. ಆರ್ಸಿಬಿ ತಂಡ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಮ್ಯಾಕ್ಸ್‌ವೆಲ್ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ಮೂವರು ಆಟಗಾರರು ಆರ್ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನ್ನಬಹುದು. ಬೌಲಿಂಗ್‍ನಲ್ಲಿ ಜೇಮಿಸನ್, ಚಹಾಲ್, ಹರ್ಷಲ್ ಪಟೇಲ್, ಸಿರಾಜ್ ಆರ್ಸಿಬಿ ತಂಡದ ಪ್ರಮುಖ ಆಸ್ತ್ರಗಳು.
Advertisement
ಭಾರತದಲ್ಲಿ ನಡೆದ ಮೊದಲಾರ್ಧದ ಟೂರ್ನಿಯಲ್ಲಿ ಮಿಂಚಿದ್ದ ಆರ್ಸಿಬಿ ತಂಡ, ಯುಎಇಯಲ್ಲಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಡೆತ್ ಓವರ್‌ನಲ್ಲಿ 249.40 ಸ್ಟ್ರೈಕ್ ರೇಟ್ ಹೊಂದಿರುವ ಎಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಮೊದಲಿನಂತೆ ಅಬ್ಬರಿಸಿದರೆ ಆರ್ಸಿಬಿ ಗೆ ಗೆಲುವು ಸುಲಭವಾಗಲಿದೆ.