ದುಬೈ: ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಆರಂಭಿಕರಾಗಿ ಬಂದು ಕಡೆಯ ಓವರ್ ವರೆಗೂ ಬ್ಯಾಟ್‍ಬೀಸಿ ಪಂಜಾಬ್‍ಗೆ ಗೆಲುವಿನ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸದರೂ ಕೂಡ, ಅಂತಿಮವಾಗಿ ಪಂಜಾಬ್ ತಂಡ ಕೋಲ್ಕತ್ತಾ ವಿರುದ್ಧ 5 ವಿಕೆಟ್‍ಗಳ ಜಯಗಳಿಸಿ ಗೆಲುವಿನ ನಗೆ ಬೀರಿದೆ.
ಪಂಜಾಬ್ ಪರ ಭರ್ಜರಿಯಾಗಿ ಆಡಿದ ರಾಹುಲ್ 67ರನ್(55 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಅಂತಿಮ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರೆ ಇವರಿಗೆ ಉತ್ತಮವಾಗಿ ಸಾತ್ ನೀಡಿದ ಶಾರೂಕ್ ಖಾನ್ ಕೇವಲ 9 ಎಸೆತದಲ್ಲಿ 22ರನ್(2 ಸಿಕ್ಸ್, 1 ಬೌಂಡರಿ)ಸಿಡಿಸಿ ಇನ್ನೂ ಮೂರು ಎಸೆತ ಬಾಕಿ ಇರುವಂತೆ ಪಂಜಾಬ್‍ಗೆ ಗೆಲುವು ತಂದು ಕೊಟ್ಟರು.
Advertisement
Advertisement
ಕೋಲ್ಕತ್ತಾ ನೀಡಿದ 166ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಪಂಜಾಬ್ ತಂಡಕ್ಕೆ ಆರಂಭಿಕ ಜೋಡಿ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 70ರನ್(54 ಎಸೆತ)ಗಳ ಜೊತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 40ರನ್(27 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ನಿಕೂಲಸ್ ಪೂರನ್ 12ರನ್(7 ಎಸೆತ, 1 ಸಿಕ್ಸ್)ಗೆ ಸುಸ್ತಾದರು. ನಂತರ ಬಂದ ಏಡನ್ ಮಾಕ್ರಮ್ 18ರನ್(ಎಸೆತ, 1ಸಿಕ್ಸ್) ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು
Advertisement
Advertisement
ಅಯ್ಯರ್ ಆರ್ಭಟ
ಟಾಸ್ ಗೆದ್ದ ಪಂಜಾಬ್, ಕೋಲ್ಕತ್ತಾ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕೋಲ್ಕತ್ತಾದ ಯುವ ಆಟಗಾರ ವೆಂಕಟೇಶ್ ಅಯ್ಯರ್ ಆರಂಭದಿಂದಲೇ ಪಂಜಾಬ್ ಬೌಲರ್ ಗಳ ಮೇಲೆರಗಿದರು. ಶುಭಮನ್ ಗಿಲ್ 7ರನ್(7 ಎಸೆತ, 1 ಬೌಂಡರಿ) ಸಿಡಿಸಿ ಅರ್ಶ್‍ದೀಪ್ ಸಿಂಗ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ರಾಹುಲ್ ತ್ರಿಪಾಠಿ ಮತ್ತು ಅಯ್ಯರ್ 2ನೇ ವಿಕೆಟ್‍ಗೆ 72ರನ್(55 ಎಸೆತ) ಜೊತೆಯಾಟವಾಡಿದರು. ರಾಹುಲ್ ತ್ರಿಪಾಠಿ 34ರನ್(26 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ನಿತೇಶ್ ರಾಣಾ ವೇಗವಾಗಿ ಬ್ಯಾಟ್‍ಬೀಸಿ 31ರನ್(18 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ನಿರ್ಗಮಿಸಿದರು. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್
ಅರ್ಶ್‍ದೀಪ್ ಸಿಂಗ್ ಅಘಾತ
ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಭರ್ಜರಿ ಬ್ಯಾಟ್‍ಬೀಸಿದ ಅಯ್ಯರ್ 67ರನ್(49 ಎಸೆತ, 9 ಬೌಂಡರಿ, 1 ಸಿಕ್ಸ್)ಅರ್ಧಶತಕ ಸಿಡಿಸಿ ಔಟ್ ಆದರು. ನಂತರ ವಿಕೆಟ್ ಕಳೆದುಕೊಂಡು ಸಾಗಿದ ಕೋಲ್ಕತ್ತಾ ಅಂತಿಮವಾಗಿ 20 ಓವರ್‍ಗಳ ಮುಕ್ತಾಯಕ್ಕೆ 165ರನ್ ಗಳಿಸಿತು. ಪಂಜಾಬ್ ತಂಡದ ಬೌಲರ್ ಅರ್ಶ್‍ದೀಪ್ ಸಿಂಗ್ ಕೋಲ್ಕತಾದ ಪ್ರಮುಖ ಮೂರು ವಿಕೆಟ್ ಕಿತ್ತು ರನ್ ಕಡಿವಾಣ ಹಾಕಿದರು. ರವಿ ಬಿಷ್ನೋಯಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.