ಅಹಮದಾಬಾದ್: ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. 7 ಗಂಟೆಗೆ ಶುರುವಾದ ಮಳೆ ಬಿಟ್ಟು ಬಿಟ್ಟು ಕಾಡುತ್ತಿದೆ. ರಾತ್ರಿ 10.50 ಸಮಯ ಮೀರಿದರೂ ಮಳೆ ಬಿಡುವು ನೀಡದೇ ಆಟವಾಡಿಸುತ್ತಿದೆ.
Advertisement
ರಾತ್ರಿ 9.35ರ ವೇಳೆಗೆ ಮಳೆ ನಿಂತರೇ 20 ಓವರ್‌ಗಳ ಪಂದ್ಯವನ್ನೇ ಆಡಿಸಲು ಐಪಿಎಲ್ ಮಂಡಳಿ ನಿರ್ಧರಿಸಿತ್ತು. ಆದ್ರೆ ಸಮಯ ಮೀರಿದ್ದು, ಇದೀಗ 5 ಓವರ್‌ಗಳ ಪಂದ್ಯಕ್ಕೆ ಆಟಗಾರರು ಅಣಿಯಾಗಬೇಕಾಗಿದೆ. ಒಂದು ವೇಳೆ 11 ಗಂಟೆ ಬಳಿಕ ಮಳೆ ನಿಂತರೇ ಮೈದಾನ ಶುಚಿಗೊಳಿಸಲು ಕನಿಷ್ಠ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ನಂತರ ಮಧ್ಯರಾತ್ರಿ 12.06 ರಿಂದ 5 ಓವರ್ ಪಂದ್ಯಕ್ಕೆ ಸೀಮಿತಗೊಳಿಸಲಾಗುತ್ತದೆ. ಮಳೆ ನಿರಂತರವಾಗಿ ಮುಂದುವರಿದರೆ ಪಂದ್ಯ ರದ್ದು ಮಾಡಬೇಕಾಗುತ್ತದೆ ಎಂದು ಐಪಿಎಲ್ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು
Advertisement
Advertisement
ಸಂಜೆ 7 ಗಂಟೆಯಿಂದಲೇ ಆರಂಭಗೊಂಡ ಮಳೆ 8:30ರ ವೇಳೆಗೆ ಬಿಡುವು ನೀಡಿತ್ತು. ಇನ್ನೇನು ಪಂದ್ಯ ಆರಂಭಕ್ಕೆ ಎಲ್ಲ ಸಿದ್ಧತೆ ಮತ್ತೆ ವಕ್ಕರಿಸಿದ ಮಳೆರಾಯ ಬಿಟ್ಟೂ ಬಿಡದೇ ಕಾಡುತ್ತಿದೆ. ಈಗಾಗಲೇ ಪ್ರೇಕ್ಷಕರು ಹೊರಾಂಗಣದತ್ತ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಇಂದಿನ ಪಂದ್ಯ ನಡೆಯುವುದು ಅನುಮಾನವಾಗಿದೆ. ಇಂದಿಗೆ ಪಂದ್ಯ ರದ್ದಾದರೇ ಮೇ 29 ರಂದು ಸಂಜೆ 7:30ಕ್ಕೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: IPL 2023 Finals: ಕ್ಲೈಮ್ಯಾಕ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?