ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

Public TV
1 Min Read
RCB KGF

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರ ಕೆಜಿಎಫ್-2 ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಐಪಿಎಲ್‍ನಲ್ಲಿ ಆಡುವ ಕರ್ನಾಟಕದ ತಂಡ ಆರ್​ಸಿಬಿಯಲ್ಲಿ ಕೆಜಿಎಫ್ ಸ್ಟಾರ್ಸ್ ಕಾಣಿಸಿಕೊಂಡಿದ್ದಾರೆ.

FotoJet 10 18

ಸ್ಯಾಂಡಲ್‍ವುಡ್ ಅಂಗಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಹಿಟ್ ಆಗಿತ್ತು. ಬಳಿಕ ಕೆಜಿಎಫ್-2ಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದು ಚಿತ್ರಮಂದಿರಕ್ಕೆ ಬರಲು ಕೆಜಿಎಫ್ ಚಿತ್ರ ತಂಡ ಸಿದ್ಧತೆಯಲ್ಲಿದೆ.  ಇದನ್ನೂ ಓದಿ: ಕೆಜಿಎಫ್2ಗೆ ಧ್ವನಿ ನೀಡಿದ ಮಸ್ತ್ ಮಸ್ತ್ ಹುಡುಗಿ

RCB

ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತು. ಆ ಬಳಿಕ ಇದೀಗ ಕೆಜಿಎಫ್-2 ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇನ್ನೇನು ಏಪ್ರಿಲ್ 14ಕ್ಕೆ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ. ಹಾಗಾಗಿ ಅಭಿಮಾನಿಗಳ ಚಿತ್ತ ಏಪ್ರಿಲ್‍ನತ್ತ ನೆಟ್ಟಿದೆ. ಇದೀಗ ಕ್ರಿಕೆಟ್‍ನಲ್ಲೂ ಕೆಜಿಎಫ್ ಹವಾ ಪ್ರಾರಂಭಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು  (ಆರ್​ಸಿಬಿ) ತಂಡದಲ್ಲಿ ಕೆಜಿಎಫ್ ಸ್ಟಾರ್ಸ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:  ಕೆಜಿಎಫ್ ಟೀಮ್​ ಜೊತೆ ಕ್ರಿಕೆಟ್ ಆಡಿದ ಯಶ್: ವೀಡಿಯೋ ವೈರಲ್

KGF 2 1 2

ಕನ್ನಡದ ಚಿತ್ರ ಕೆಜಿಎಫ್ ಹೊಸ ಕ್ರೇಜ್ ಹುಟ್ಟುಹಾಕಿರುವಂತೆ ಆರ್​ಸಿಬಿ ತಂಡದಲ್ಲಿರುವ ಮೂವರು ಬ್ಯಾಟ್ಸ್‌ಮ್ಯಾನ್‌ಗಳಿಗೆ ಕೆಜಿಎಫ್ ಟೈಟಲ್ ನೀಡಲಾಗಿದೆ. ಹೌದು ಇದೀಗ ಆರ್​ಸಿಬಿ ತಂಡದಲ್ಲಿರುವ ಕೆ.ಜಿ.ಎಫ್‍ನ ಸ್ಟಾರ್‌ಗಳಾಗಿ K – ಕೊಹ್ಲಿ, G – ಗ್ಲೇನ್ ಮ್ಯಾಕ್ಸ್‌ವೆಲ್‌, F – ಫಾಫ್ ಡು ಪ್ಲೆಸಿಸ್ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಈ ಕೆಜಿಎಫ್ ಸ್ಟಾರ್‌ಗಳನ್ನು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಈ ಫೋಟೋ ವೈರಲ್ ಆಗತೊಡಗಿದೆ. ಇದನ್ನೂ ಓದಿ: ಕೆಜಿಎಫ್ 2, ಲಾಲ್ ಸಿಂಗ್ ಚಡ್ಡಾ ಒಂದೇ ದಿನ ರಿಲೀಸ್

ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡ ಸಿಎಸ್‍ಕೆ ತಂಡದಲ್ಲಿದ್ದ ಡು ಪ್ಲೆಸಿಸ್‌ಸನ್ನು 7 ಕೋಟಿ ರೂ. ನೀಡಿ ಖರೀದಿಸಿತ್ತು. ಅಲ್ಲದೆ ವಿರಾಟ್ ಕೊಹ್ಲಿ ಮತ್ತು  ಮ್ಯಾಕ್ಸ್‌ವೆಲ್‌ರನ್ನು ಈ ಮೊದಲು ರಿಟೈನ್ ಮಾಡಿಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *