ಬೆಂಗಳೂರು: ಐಪಿಎಲ್ ಪಂದ್ಯದ ಟಿವಿ ಸ್ಕ್ರೀನ್ ನಲ್ಲಿ ಕಾಣುವ ಲೈವ್ ಸ್ಕೋರ್ ಬೋರ್ಡ್ ಕಳೆದ ಐಪಿಎಲ್‍ಗಳಿಂದ ಈ ಬಾರಿ ಮತ್ತಷ್ಟು ಆಕರ್ಷವಾಗಿ ಕಾಣುತ್ತಿದ್ದು ಇದಕ್ಕೆ ಈಗ ಮತ್ತೊಂದು ಟಿಕ್ಕರ್ ಸೇರಿಸಲಾಗಿದೆ.
ಇಲ್ಲಿಯವರೆಗೆ ಸ್ಕ್ರೀನ್ ನಲ್ಲಿ ಇಬ್ಬರು ಬ್ಯಾಟ್ಸ್ ಮನ್ ಗಳ ಹೆಸರು, ಅವರ ಹೊಡೆದ ರನ್, ಬೌಲರ್ ಹೆಸರು ಮತ್ತು ಆತನ ಓವರ್, ಒಟ್ಟು ರನ್, ಎಷ್ಟು ವಿಕೆಟ್ ಹೋಗಿದೆ, ಎಷ್ಟು ಓವರ್ ಆಗಿದೆ, ಒಂದು ಓವರ್‍ನಲ್ಲಿ ಎಷ್ಟು ರನ್ ಆಗಿದೆ, ರನ್ ರೇಟ್ ಎಷ್ಟಿದೆ, ಎಷ್ಟು ಬಾಲಿನಲ್ಲಿ ಎಷ್ಟು ರನ್ ಬೇಕು ಎನ್ನುವ ಮಾಹಿತಿಯನ್ನು ತೋರಿಸಲಾಗುತಿತ್ತು. ಆದರೆ ಈಗ ತಂಡದ ಒಟ್ಟು ಮೊತ್ತ ಮತ್ತು ಆ ತಂಡ ಗಳಿಸಬೇಕಾದ ಟಾರ್ಗೆಟ್ ಮಧ್ಯೆ ಕೆಂಪು ಮತ್ತು ಹಸಿರು ಬಣ್ಣಗಳಿರುವ ಹೊಸ ಮೀಟರ್ ಪಟ್ಟಿ ಬಂದಿದೆ.
ಈ ಹೊಸ ಪಟ್ಟಿ ವಿಶೇಷತೆ ಏನೆಂದರೆ ಕೆಲವೊಮ್ಮೆ ಪ್ರತಿ ಓವರ್‍ಗೆ ಒಮ್ಮೆ ಬದಲಾದರೆ ಒಮ್ಮೊಮ್ಮೆ ಬದಲಾಗದೇ ಇರುತ್ತದೆ. ಹೀಗಾಗಿ ಈ ಪಟ್ಟಿಯನ್ನು ಯಾಕೆ ಸ್ಕ್ರೀನ್ ನಲ್ಲಿ ತೋರಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
#1. ಈ ಮೀಟರ್ ಪಟ್ಟಿ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಾತ್ರ ಕಾಣುತ್ತದೆ.
#2. ಮಧ್ಯದಲ್ಲಿರುವ ಪಾಯಿಂಟ್ ಒಂದು ತಂಡ ಗೆಲ್ಲಲು ಆ ಓವರ್ ನಲ್ಲಿ ಎಷ್ಟು ರನ್ ಗಳಿಸಬೇಕು ಎನ್ನುವ ವಿವರವನ್ನು ನೀಡುತ್ತದೆ.
#3. ಎಡಗಡೆಯ ಭಾಗ ಕೆಂಪು ಬಣ್ಣವನ್ನು ಪ್ರತಿನಿಧಿಸಿದರೆ ಬಲಗಡೆಯ ಭಾಗ ಹಸಿರು ಬಣ್ಣವನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ಗೆರೆ ಪ್ರತಿ ಓವರ್‍ಗೆ ಬದಲಾಗುತ್ತಿರುತ್ತದೆ.
#3 ಈಗ ತಂಡವೊಂದು ಆ ಪಂದ್ಯವನ್ನು ಜಯಗಳಿಸಲು ಪ್ರತಿ ಓವರ್‍ಗೆ 8 ರನ್ ಹೊಡೆಯಬೇಕು ಎಂದು ಭಾವಿಸಿಕೊಳ್ಳಿ. ಆ ತಂಡ ಆ ಓವರ್‍ನಲ್ಲಿ 7 ರನ್ ಗಳಿಸಿದರೆ ಬೇಕಾಗಿರುವ ರನ್ ರೇಟ್‍ಗಿಂತ ಹಿಂದೆ ಇದೆ ಎನ್ನುವುದನ್ನು ವೀಕ್ಷಕರಿಗೆ ವಿವರಿಸಲು ಕೆಂಪು ಪಟ್ಟಿಯನ್ನು ತೋರಿಸುತ್ತದೆ. ಒಂದು ವೇಳೆ ಬೇಕಾಗಿದ್ದ ರನ್ ಗಿಂತಲೂ ಹೆಚ್ಚು ರನ್ ಬಂದರೆ ಉದಾ. ಆ ಓವರ್‍ಗೆ 10 ರನ್ ಬಂದರೆ ಹಸಿರು ಪಟ್ಟಿಯ ಮೀಟರ್ ಕಾಣುತ್ತದೆ.
#4. ಸಿಕ್ಸರ್, ಬೌಂಡರಿ ಸಿಡಿದಾಗ ಅಥವಾ ಎಸೆತಗಳಿಗೆ ರನ್ ಬಾರದೇ ಇದ್ದಾಗ ಈ ಟಿಕ್ಕರ್ ಬಣ್ಣ ಬದಲಾಗುತ್ತಿರುತ್ತದೆ.