LatestChitradurgaDistrictsMain Post

IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

ಚಿತ್ರದುರ್ಗ: ಐಪಿಎಲ್ ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

ದಸರಾ ಹಬ್ಬದ ಆಯುಧ ಪೂಜೆ ಹಿನ್ನೆಲೆಯಲ್ಲಿ ಇಸ್ಪಿಟ್ ಜೂಜುಕೋರ ತಮ್ಮಣ್ಣಗೆ ಪರಶುರಾಂಪುರ ಠಾಣೆಯಲ್ಲಿ ಪಿಎಸ್‍ಐ ಸ್ವಾತಿ ಸನ್ಮಾನಿಸಿದ್ದಾರೆ. ಪರಶುರಾಂಪುರ ಠಾಣೆ ಪಿಎಸ್‍ಐ ಸ್ವಾತಿ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮದ ಅಂಗವಾಗಿ ಸನ್ಮಾನ ಸಮಾರಂಭ ನಡೆದಿದ್ದೂ, ಅಕ್ರಮ ದಂಧೆಕೋರರಿಗೆ ಪೊಲೀಸರು ಸನ್ಮಾನ ಮಾಡಿ ಸತ್ಕರಿಸಿದ್ದಾರೆ.  ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!

IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

ಇನ್ನು ಈ ದಂಧೆಕೋರ ತಮ್ಮಣ್ಣ ತಳಕು ಠಾಣೆ ವ್ಯಾಪ್ತಿಯ ಐಪಿಎಲ್ ಬೆಟ್ಟಿಂಗ್, ಇಸ್ಪಿಟ್ ಜೂಜಾಟ ಕೇಸುಗಳಲ್ಲಿ ಭಾಗಿಯಾಗಿದ್ದೂ, ಈ ದಂಧೆಕೋರರ ದಂಧೆಗೆ ಪೊಲೀಸರು ಸಾಥ್ ನೀಡ್ತಿದ್ದಾರೆಂಬ ಆರೋಪ ಸಹ ವ್ಯಕ್ತವಾಗಿದೆ. ಇಂತಹ ಸಮಾಜಘಾತುಕರನ್ನು ಮಟ್ಟ ಹಾಕಬೇಕಾದ ಪೊಲೀಸರೇ ಈ ರೀತಿ ಅಕ್ರಮ ದಂಧೆಕೋರರಿಗೆ ಹಾರ, ತುರಾಯಿ, ಶಾಲು ಹಾಕಿ ಸನ್ಮಾನಿಸಿರೋದು ಸಾರ್ವಜನಿಕರ ಆಕ್ರೋಶಕ್ಕೆ ದಾರಿಯಾಗಿದೆ. ಇನ್ನು ತಮ್ಮಣ್ಣನನ್ನು ಪಿಎಸ್‍ಐ ಸನ್ಮಾನಿಸುತ್ತಿರೋ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದೂ, ಪೊಲೀಸರ ಈ ಕೆಲಸಕ್ಕೆ ಪ್ರಜ್ಞಾವಂತರಿಂದ ಬಾರಿ ಟೀಕೆಗಳು ಕೇಳಿಬಂದಿವೆ. ಇದನ್ನೂ ಓದಿ: IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

Related Articles

Leave a Reply

Your email address will not be published. Required fields are marked *